ಪಲ್ಸ್ ಪೊಲಿಯೊ ಕಾರ್ಯಕ್ರಮ;ಕೊಡಗು ಜಿಲ್ಲೆಯಲ್ಲಿ 5 ವರ್ಷದೊಳಗಿನ 32,702 ಮಕ್ಕಳಿಗೆ ಪೊಲಿಯೊ ಹನಿ

Dec 20, 2025 - 17:31
 0  110
ಪಲ್ಸ್ ಪೊಲಿಯೊ ಕಾರ್ಯಕ್ರಮ;ಕೊಡಗು ಜಿಲ್ಲೆಯಲ್ಲಿ 5 ವರ್ಷದೊಳಗಿನ 32,702 ಮಕ್ಕಳಿಗೆ ಪೊಲಿಯೊ ಹನಿ

ಮಡಿಕೇರಿ:-ಡಿಸೆಂಬರ್, 21 ರಂದು ಕರ್ನಾಟಕ ರಾಜ್ಯದಾದ್ಯಂತ ಪಲ್ಸ್ ಪೊಲಿಯೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಅದರಂತೆ ಕೊಡಗು ಜಿಲ್ಲೆಯಲ್ಲಿಯೂ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 0 ಯಿಂದ 5 ವರ್ಷದ ಒಳಗಿನ ಒಟ್ಟು 32,702 ಮಕ್ಕಳಿದ್ದು, ನಗರ ವ್ಯಾಪ್ತಿಯಲ್ಲಿ 3,275 ಗ್ರಾಮೀಣ ವ್ಯಾಪ್ತಿಯಲ್ಲಿ 29,427 ಮಕ್ಕಳಿರುತ್ತಾರೆ. ಇವರಲ್ಲಿ ಸ್ಥಿರವಾಸಿತ ವಲಸೆ ಒಟ್ಟು 15,788, ವಲಸೆ ಕಾರ್ಮಿಕರ 4,112 ಮಕ್ಕಳನ್ನು ಗುರುತಿಸಲಾಗಿದೆ. 

ಡಿಸೆಂಬರ್ 21 ರಂದು ಜಿಲ್ಲೆಯಲ್ಲಿ ತೆರೆಯಲ್ಪಟ್ಟಿರುವ 470 ಬೂತ್‍ಗಳು ಹಾಗೂ 32 ಸಂಚಾರಿ ಬೂತ್‍ಗಳಲ್ಲಿ ಲಸಿಕೆ ಹಾಕಲಾಗುವುದು. ಈ ದಿನ ತಪ್ಪಿ ಹೋಗಿರುವ, ಬಿಟ್ಟು ಹೋಗಿರುವ ಹೊಸದಾಗಿ ವಲಸೆ ಬಂದಿರುವ ಮಕ್ಕಳನ್ನು ಹುಡುಕಲು ದಿನಾಂಕ 22, 23 ಗ್ರಾಮೀಣ ಪ್ರದೇಶದಲ್ಲಿ ಎರಡು ದಿನ. ನಗರ ಪ್ರದೇಶದಲ್ಲಿ 22.23 ಮತ್ತು 24 ರಂದು ಮೂರು ದಿನ ಮನೆಮನೆ ಬೇಟಿ ನೀಡಿ ಲಸಿಕೆ ನೀಡಲಾಗುತ್ತದೆ. 85 ಮೇಲ್ವಿಚಾರಕರನ್ನು ಮತ್ತು 973 ಮನೆ ಭೇಟಿ ನೀಡುವ ತಂಡಗಳನ್ನು ರಚಿಸಲಾಗಿರುತ್ತದೆ.

ಜಿಲ್ಲೆಗೆ ಆಗಮಿಸುವ ಎಲ್ಲಾ ವಲಸೆ ಕಾರ್ಮಿಕರ ಮೇಲೆ ಗಮನಹರಿಸಲಾಗಿದ್ದು, ಈ ಕಾರ್ಮಿಕರನ್ನು ಇಟ್ಟುಕೊಂಡಿರುವ ತೋಟ ಮಾಲೀಕರು. ಗುತ್ತಿಗೆದಾರರು. ಇಟ್ಟಿಗೆ ಗೂಡು ಮಾಲೀಕರು, ಕಟ್ಟಡ ಕಾಮಗಾರಿ ನಡೆಸುವ ಗುತ್ತಿಗೆದಾರರು, ತಮ್ಮಲ್ಲಿ ಕೆಲಸ ಮಾಡುವ ಕುಟುಂಬದಲ್ಲಿ 0 ಯಿಂದ 05 ವರ್ಷದ ಒಳಗೆ ಮಕ್ಕಳಿದ್ದಲ್ಲಿ, ಇವರು ಸಮೀಪದ ಬೂತ್‍ನಲ್ಲಿ ಲಸಿಕೆ ಹಾಕಿಸ ಬೇಕಿದೆ. ಹಾಗೆ ಜಿಲ್ಲೆಗೆ ಆಗಮಿಸುವ ಎಲ್ಲಾ ಪ್ರವಾಸಿಗರೊಂದಿಗೆ ಐದು ವರ್ಷದ ಒಳಗಿನ ಮಕ್ಕಳು ಕಂಡುಬಂದಲ್ಲಿ, ಅಂತ ಮಕ್ಕಳಿಗೆ ಸಮೀಪದ ಬೂತ್‍ನಲ್ಲಿ ಲಸಿಕೆ ಹಾಕಿಸಬೇಕಾಗಿರುತ್ತದೆ. ಹಾಗೆಯೇ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಗುತ್ತಿಗೆದಾರರು, ತೋಟಮಾಲೀಕರು ಹಾಗೂ ಹೋಂಸ್ಟೇ, ಹೋಟೆಲ್, ರೆಸಾರ್ಟ್ ಮಾಲೀಕರು ಸಹಕರಿಸುವಂತೆ ವಿನಂತಿಸಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0