Kodagu

ಶನಿವಾರಸಂತೆ:ಕಾಡಾನೆ ದಾಳಿಗೆ ಕೃಷಿಕ ಬಲಿ

admincoorgdaily

ಶನಿವಾರಸಂತೆ:ಕಾಡಾನೆ  ದಾಳಿಗೆ ಕೃಷಿಕ ಬಲಿ

ಶನಿವಾರಸಂತೆ:ಕೃಷಿ ಕಾರ್ಯಕ್ಕೆ ತಮ್ಮ ಜಮೀನಿಗೆ ಬಂದಾಗ ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬ ಬಲಿಯಾದ ಘಟನೆ ಶನಿವಾರಸಂತೆ ಸಮೀಪದ ಗಣಗೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಗಯ್ಯಪುರ ಗ್ರಾಮದಲ್ಲಿ ನಡೆದಿದೆ. ಪೊನ್ನಪ್ಪ(62) ಮೃತ ವ್ಯಕ್ತಿ.

ಸಾಕು ನಾಯಿಯನ್ನು ಕೊಂದು ಪೊನ್ನಪ್ಪ ಅವರ ಮೇಲೆ ಕಾಡಾನೆ ದಾಳಿ ಮಾಡಿದೆ. ಸ್ಥಳಕ್ಕೆ ಎ ಸಿ ಎಫ್ ಗೋಪಾಲ್ ಆರ್ ಎಫ್ ಒ ಶೈಲೇಂದ್ರ,DRF ಶ್ರಾವಣ ಕುಮಾರ್, ಇಲಾಖೆಯ ಈರಣ್ಣ, ವೆಂಕಟೇಶ್, ಪ್ರವೀಣ್ ಕುಮಾರ್, ರಂಜಿತ್, ವೇದಮೂರ್ತಿ, ಸೋಮವಾರಪೇಟೆ ಪೊಲೀಸ್ ಠಾಣಾಧಿಕಾರಿ, ಹಾಗೂ ವೃತ್ತ ನೀರಿಕ್ಷಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದಾಗ, ಸ್ಥಳಕ್ಕೆ ಬಂದ ಎ.ಸಿಎಫ್ ಗೋಪಾಲ್ ಪ್ರತಿಭಟನಗಾರರನ್ನು ಮನವೊಲಿಸುವಲ್ಲಿ ಯಶಸ್ಸುಗೊಳಿಸಿದ್ದಾರೆ.