ಮೂರು ದಿನ ಕಳೆದರೂ ಪತ್ತೆಯಾಗದ ಶರಣ್ಯ; ನಾಪೋಕ್ಲುವಿಗೆ ಶರಣ್ಯ ಕುಟುಂಬಸ್ಥರ ಆಗಮನ

ಮೂರು ದಿನ ಕಳೆದರೂ ಪತ್ತೆಯಾಗದ ಶರಣ್ಯ;  ನಾಪೋಕ್ಲುವಿಗೆ ಶರಣ್ಯ ಕುಟುಂಬಸ್ಥರ ಆಗಮನ

ವರದಿ :ಝಕರಿಯ ನಾಪೋಕ್ಲು

 ನಾಪೋಕ್ಲು :ಕಕ್ಕಬ್ಬೆ ಬಳಿಯ ಕಬ್ಬಿನಕಾಡುವಿನ ಹೋಂಸ್ಟೇಗೆ ಕೇರಳದಿಂದ ಬಂದ ಶರಣ್ಯ ಗುರುವಾರ ತಡಿಯಂಡ ಮೋಳ್ ಬೆಟ್ಟಕ್ಕೆ ಚಾರಣಕ್ಕೆ ತೆರಳಿದ್ದರು.ಕೇರಳದ 36 ವಷ೯ದ ಶರಣ್ಯ ನಿಗೂಡವಾಗಿ ನಾಪತ್ತೆಯಾಗಿತ್ತು.

ಶರಣ್ಯ ನಾಪತ್ತೆಯಾಗಿ 3 ದಿನಗಳಾಗುತ್ತಾ ಬಂದಿದ್ದು ಇನ್ನೂ ಸುಳಿವು ಸಿಗಲಿಲ್ಲ. ಗುರುವಾರದಿಂದ ತಡಿಯಂಡಮೋಳ್ ಬೆಟ್ಟದಲ್ಲಿ ಶರಣ್ಯ ಪತ್ತೆಗಾಗಿ ಸ್ಥಳೀಯರ ಸಹಕಾರದಿಂದ ಪೊಲೀಸ್ ,ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಡ್ರೋನ್ ಹಾಗೂ ಸ್ವಾನದಳದೊಂದಿಗೆ ತೀವ್ರ ಶೋಧ ನಡೆಸಿದರು ಶರಣ್ಯ ಪತ್ತೆಯಾಗಲಿಲ್ಲ.

ಶುಕ್ರವಾರ ಬೆಳಿಗ್ಗೆಯಿಂದಲೇ ತಡಿಯಂಡಮೋಳ್ ಬೆಟ್ಟದ ದಟ್ಟ ಕಾಡಿನಲ್ಲಿ ಶರಣ್ಯಳಿಗಾಗಿ 4 ತಂಡಗಳನ್ನು ರಚಿಸಿ ಹುಡುಕಾಡಿದರು ಶರಣ್ಯ ಸುಳಿವು ಸಿಗಲಿಲ್ಲ. ಶನಿವಾರ ಬೆಳಿಗ್ಗೆಯಿಂದಲೇ ಪೊಲೀಸ್, ಅರಣ್ಯ ಇಲಾಖೆ ಹಾಗೂ ಸ್ಥಳೀಯರ ತಂಡ ಶರಣ್ಯ ಪತ್ತೆ ಕಾರ್ಯಚರಣೆ ಮತ್ತೆ ಮುಂದುವರಿಸಿದ್ದರು. ಆದರೂ ಶರಣ್ಯ ಸುಳಿವು ಪತ್ತೆಯಾಗದೆ ಇರುವುದು ಆತಂಕಕ್ಕೆ ಎಡೆ ಮಾಡಿದೆ.

ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಶರಣ್ಯ ನಾಪತ್ತೆ ಪ್ರಕರಣ ದಾಖಲಾಗಿದ್ದು, ಕೇರಳದಿಂದ ಶರಣ್ಯಳ ಸಹೋದರ ಶ್ಯಾಮ್ ಹಾಗೂ ಸಂಬಧಿಕರು ತಡಿಯಂಡಮೊಳ್ ಬೆಟ್ಟಕ್ಕೆ ಪೊಲೀಸರೊಂದಿಗೆ ಪತ್ತೆಕಾರ್ಯದಲ್ಲಿ ತೊಡಗಿದ್ದರು ಎಂದು ತಿಳಿದು ಬಂದಿದೆ.

ಕೇರಳದ ಕ್ಯಾಲಿಕೆಟ್ ನ ನಾದಾಪುರಂ ನಿವಾಸಿ ಯಾಗಿರುವ ಶರಣ್ಯ ಅವಿವಾಹಿತೆಯಾಗಿದ್ದು ಕೊಚ್ಚಿನ್‌ನಲ್ಲಿ ಐಟಿ ಉದ್ಯೋಗಿಯಾಗಿದ್ದಾರೆ. ನಾಪತ್ತೆಯಾಗಿರುವ ಶರಣ್ಯ ಪರಿಸರ ಪ್ರೇಮಿ ಕೂಡ ಆಗಿದ್ದು ಈ ಹಿಂದೆ ಹಲವು ಕಡೆಗಳಲ್ಲಿ ಟ್ರಕ್ಕಿಂಗ್ ಗೆ ತೆರಳಿದ್ದರು.ಆದರೆ ಕೊಡಗಿನ ತಡಿಯಂಡಮೋಳ್ ಬೆಟ್ಟಕ್ಕೆ ಬರುವ ಬಗ್ಗೆ ಕುಟುಂಬಸ್ಥರಿಗೆ ಯಾವುದೇ ಮಾಹಿತಿ ನೀಡಲಿಲ್ಲವೆಂದು ಸಹೋದರ ಶ್ಯಾಮ್ ಮಾಹಿತಿ ನೀಡಿದ್ದಾರೆ.

ಶರಣ್ಯಳಿಗೆ ಯಾವುದೇ ತೊಂದರೆಯಾಗದೆ ಸುರಕ್ಷಿತವಾಗಿ ಶೀಘ್ರ ಮರಳಿ ಬರಲಿ ಎಂದು ಕಕ್ಕಬ್ಬೆ ಯುವಕಪಾಡಿ ಗ್ರಾಮದ ಬೆಟ್ಟ ಪ್ರದೇಶದಲ್ಲಿ ವಾಸಿಸುವ ಕುಡಿಯ ಜನಾಂಗದವರು ಮಲೆ ತಮ್ಮಚ್ಚ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.

 ತಡಿಯಂಡಮೋಳ್ ಬೆಟ್ಟದಲ್ಲಿ ದಟ್ಟ ಮಳೆ ಮೋಡ ಕವಿದಿದ್ದು ಪೋಲಿಸ್ ಅರಣ್ಯ ಇಲಾಖೆ ಹಾಗು ಸ್ಥಳೀಯರು ಕಡಿದ ಹಾದಿಯಲ್ಲಿ ಸಾಗಿ ಹರಸಾಹಸದಿಂದ ಶರಣ್ಯಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

 ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಎನ್. ಬಿಂದುಮನಿಯವರು ಭೇಟಿ ನೀಡಿ ಶರಣ್ಯ ಪತ್ತೆ ಕಾರ್ಯಾಚರಣೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.ಶರಣ್ಯ ಅವರ ಕುಟುಂಬಸ್ಥರು ಶಾಸಕ ಎಎಸ್ ಪೊನ್ನಣ್ಣ ಅವರನ್ನು ಭೇಟಿಯಾಗಿ ಮಾತುಕತೆ ‌ನಡೆಸಿದ್ದಾರೆ.