ಸಿದ್ದಾಪುರ;ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ

Apr 5, 2026 - 08:04
 0  1.7k
ಸಿದ್ದಾಪುರ;ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ

ಸಿದ್ದಾಪುರ : ಚಲಿಸುತ್ತಿದ್ದ ವಾಹನವು ತಾಂತ್ರಿಕದೋಷದ ಪರಿಣಾಮ‌ ಬೆಂಕಿಗೆ ಆಹುತಿಯಾದ ಘಟನೆ ಸಿದ್ದಾಪುರ ಸಮೀಪದ‌ ಇಂಜಿಲಗೆರೆಯಲ್ಲಿ ನಡೆದಿದೆ.

ಮಲಗೋಡು ನಿವಾಸಿ ಅರುಣ್ ಎಂಬಾತ ತನ್ನ ಮಾರುತಿ 800 ವಾಹನದಲ್ಲಿ ಇಂಜಿಲಗೆರೆಯಲ್ಲಿರುವ ಸಂಬಂಧಿಕರ ಮನೆಗೆ ಕುಟುಂಬದೊಂದಿಗೆ ತೆರಳುತ್ತಿದ್ದ ಸಂಧರ್ಭದಲ್ಲಿ ಮಾರ್ಗ ಮದ್ಯೆ ದಿಡೀರನೆ ವಾಹನದ ಮುಂಬಾಗದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ವಾಹನವನ್ನು ರಸ್ತೆಯಿಂದ ಅಲ್ಪ ಬದಿಗೆ ಸರಿಸಿ ಬೆಂಕಿ ನಂದಿಸಬಹುದೆಂದು ವಾಹನವನ್ನು ಮುಂದಕ್ಕೆ ತೆಗೆಯುತ್ತಿದ್ದಂತೆ ಒಮ್ಮೆಲೆ ಬೆಂಕಿ ಹೊತ್ತಿ ಹುರಿದಿದೆ.ಕೂಡಲೇ ವಾಹನದಲ್ಲಿದ್ದ ತನ್ನ ಕುಟುಂಬದವರನ್ನು ಕೆಳಗಿಳಿಸಿದ್ದಾರೆ.

 ಅಷ್ಟರಲ್ಲೇ ಬೆಂಕಿಯು ವಾಹನವನ್ನು ಸಂಪೂರ್ಣವಾಗಿ ಆವರಿಸಿಕೊಂಡಿದೆ. ಅದೃಷ್ಟವಶಾತ್ ಸಾವು ನೋವು ಸಂಭವಿಸಲಿಲ್ಲ.ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು ಸ್ಥಳಕ್ಕೆ‌ ಆಗಮಿಸಿ ಬೆಂಕಿಯನ್ನು ನಂದಿಸಲು ನೆರವಾದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 1
Wow Wow 1