ಸಿದ್ದಾಪುರ; ಕೊಡಗು ಜಿಲ್ಲಾ ನಿವೇಶನ ರಹಿತರ ಸಮಾವೇಶ

ಸಿದ್ದಾಪುರ; ಕೊಡಗು ಜಿಲ್ಲಾ ನಿವೇಶನ ರಹಿತರ ಸಮಾವೇಶ

ಸಿದ್ದಾಪುರ:-ತಲತಲಾಂತರಗಳಿಂದ ತೋಟದ ಲೖನ್ ಮನೆಗಳಲ್ಲಿ, ಬಾಡಿಗೆ ಮನೆಗಳಲ್ಲಿ, ನದಿತೀರದಲ್ಲಿ ವಾಸ ಮಾಡುತ್ತಿರುವ ನಿವೇಶನ ರಹಿತರ ಸಮಾವೇಶವು ಗುಹ್ಯ ಅಗಸ್ತೇಶ್ವ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು. ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದಲ್ಲಿ ನಡೆದ ಸಮವೇಶದಲ್ಲಿ ಜಿಲ್ಲೆಯ ನಿವೇಶನ ರಹಿತರ ಸಮಸ್ಯೆಗಳನ್ನು ಆಲಿಸಿ ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಯಿತು.

ಸಿದ್ದಾಪುರ ಪಟ್ಟಣದಲ್ಲಿ ಬಹಿರಂಗ ಸಭೆ;

ನಿವೇಶನ ರಹಿತರ ನೂತನ ಸಮಿತಿಯ ನೇತೃತ್ವದಲ್ಲಿ ಬಹಿರಂಗ ಸಭೆಯನ್ನು ನಡೆಸಲಾಯಿತು ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಐ (ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಹೆಚ್. ಬಿ. ರಮೇಶ್ ಕೇಂದ್ರ ಹಾಗೂ ರಾಜ್ಯ ಸರಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು ನಿವೇಶನ ರಹಿತರ ಕನಸು ಕನಸಾಗಿಯೇ ಉಳಿದಿದೆ.

2019ರ ಪ್ರವಾಹದಲ್ಲಿ ಕರಡಿಗೋಡು,ಗುಹ್ಯ, ಕಕ್ಕಟಕಾಡು, ಗೂಡುಗದ್ದೆ ಭಾಗದಲ್ಲಿ ನೂರಾರು ಮನೆಗಳು ನೆಲಸಮಗೊಂಡಿದ್ದು ಇವರಿಗೆ ನಿವೇಶ ನೀಡಲು ಪಟ್ಟಿ ಸಿದ್ದಪಡಿಸಿ ಕಂಪ್ಯೂಟರ್ ನಲ್ಲಿ ಬೆಚ್ಚನೆ ಇಟ್ಟಿದ್ದು ಇಂದಿಗೂ ಇವರ ಸಮಸ್ಯೆಗೆ ಪರಿಹಾರ ನೀಡುವಲ್ಲಿ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 ಸಿಐಟಿಯುನ ಜಿಲ್ಲಾ ಕಾರ್ಯದರ್ಶಿ ಪಿ. ಆರ್. ಭರತ್ ಮಾತನಾಡಿ ನಿವೇಶನ ರಹಿತ ಸಂತ್ರಸ್ಥರ ಸಮಸ್ಯೆಗೆ ಸ್ಪಂದಿಸುವಲ್ಲಿ ಜಿಲ್ಲೆಯ ಇಬ್ಬರು ಶಾಸಕರು ವಿಫಲರಾಗಿದ್ದು ಒತ್ತುವರಿದಾರರಿಂದ ತೆರವುಗೊಳಿಸಿ ಸಂತ್ರಸ್ಥರಿಗೆ ಮೀಸಲಿಟ್ಟಿರುವ ಭೂಮಿಯು ಹಂಚಿಕೆಯಾಗದೆ ಪಾಲುಬಿದ್ದಿದೆ. ಕಾರ್ಮಿಕರು ಸ್ವಂತ ಸೂರು ಇಲ್ಲದೆ ತೋಟದ ಲೖನ್ ಮನೆಗಳಲ್ಲಿ, ಬಾಡಿಗೆ ಮನೆಯಲ್ಲಿಯೇ ತಮ್ಮ ಜೀವನ ಕೊನೆಗೊಳ್ಳುತ್ತಿದ್ದು ಶಾಶ್ವತ ಪರಿಹಾರಕ್ಕೆ ಒತ್ತಾಯಿಸಿ ಹೋರಾಟ ರೂಪಿಸುವುದಾಗಿ ತಿಳಿಸಿದರು.

ಪ್ರಾಸ್ಥಾವಿಕವಾಗಿ ಮಾತನಾಡಿದ ನಿವೇಶನ ರಹಿತರ ಅಧ್ಯಕ್ಷ ಅನೀಲ್ ಸಿದ್ದಾಪುರ ಗ್ರಾಮ ಪಂಚಾಯಿತಿ ನಿವೇಶನ ರಹಿತರ ಅರ್ಜಿ ಸ್ವೀಕರಿಸಿ ಕಡತದಲ್ಲಿ ಇಟ್ಟಿದ್ದು ಬಿಟ್ಟರೆ ಯಾವುದೇ ಒಂದು ಅರ್ಜಿಯು ಸರಕಾರದ ಮಟ್ಟಕ್ಕೆ ಕಳುಹಿಸಿ ಕೊಟ್ಟಿಲ್ಲ. ತನ್ನ ಐದು ವರ್ಷದ ಅವದಧಿಯಲ್ಲಿ ಭೂ ಪರಿವರ್ತನೆ ಹಾಗೂ ಸದಸ್ಯರೆ ಸರ್ಕಾರಿ ಕಾಮಗಾರಿಯ ಗುತ್ತಿಗೆ ನಿರ್ವಹಿಸುತ್ತಿದ್ದು ಸಂಪೂರ್ಣ ಆಡಳಿತ ಮಂಡಳಿ ಬ್ರಹ್ಮಾಂಡ ಭ್ರಷ್ಟಾಚಾರಗಳ ಮೂಲಕ ತಮ್ಮ ಅವಧಿ ಪೂರ್ಣಗೊಳಿಸಿದ್ದು ಗ್ರಾಮದಲ್ಲಿ ರಸ್ತೆ,ಕುಡಿಯುವ ನೀರು, ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಸುವಲ್ಲಿ ಸಂಪೂರ್ಣ ವಿಫಲವಾಗಿದೆ, ಗುಹ್ಯ ಸರಕಾರಿ ಪ್ರರ್ಥಮಿಕ ಶಾಲೆಯಲ್ಲಿಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರ್ಮಿಸಿದ ವಾಲಿಬಾಲ್ ಮೈದಾನದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿದ್ದು ಇದರಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಜಿಲ್ಲೆಯ ಸಂಬಂಧ ಪಟ್ಟ ಅಧಿಕಾರಿಗಳು ಶಾಮಿಲಾಗಿರುವುದಾಗಿ ಆರೋಪಿಸಿದರು.

 ಗ್ರಾಮ ಸಮಿತಿ ಕಾರ್ಯದರ್ಶಿ ಎನ್. ಡಿ. ಕುಟ್ಟಪನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರಾದ ಉಮ್ಮರ್, ಬೖಜು, ಹಾಜರಿದ್ದರು.

ನೂತನ ಸಮಿತಿ: ನಿವೇಶನ ರಹಿತರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನ ಹೋರಾಟಲ್ಲಿ ನೂತನ ಸಮಿತಿಯನ್ನು ರಚಿಸಲಾಗಿದ್ದು ಅಧ್ಯಕ್ಷರಾಗಿ ಅನೀಲ್,ಉಪಾಧ್ಯಕ್ಷೆಯಾಗಿ ಸಿದ್ದಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಎಂ.ಎ. ಯಮುನಾ, ಖಜಾಂಚಿ ಸಿ.ಯು. ಮುಸ್ತಫ, ಸದಸ್ಯರಾದ ಉದಯ, ಕುಶ, ಬೋಜ, ಸೋಮ, ಶಿವಪ್ಪ, ಮುತ್ತ, ನೇತ್ರ ಆಯ್ಕೆಮಾಡಲಾಗಿದೆ.