ಸಿದ್ದಾಪುರ; ಗುಂಡು ಹಾರಿಸಿದ್ದು ಪಕ್ಷಿಗೆ,ತಗುಲಿದ್ದು ಸೌದೆ ತರುತ್ತಿದ್ದ ವ್ಯಕ್ತಿಗೆ:ಗುಂಡು ಹಾರಿಸಿದ್ದ ವ್ಯಕ್ತಿ ಅರೆಸ್ಟ್

Feb 26, 2026 - 05:50
 0  2.3k
ಸಿದ್ದಾಪುರ; ಗುಂಡು ಹಾರಿಸಿದ್ದು ಪಕ್ಷಿಗೆ,ತಗುಲಿದ್ದು ಸೌದೆ ತರುತ್ತಿದ್ದ ವ್ಯಕ್ತಿಗೆ:ಗುಂಡು ಹಾರಿಸಿದ್ದ ವ್ಯಕ್ತಿ ಅರೆಸ್ಟ್

ಮಡಿಕೇರಿ;ಫೆ. 25: ಪಕ್ಷಿಗೆ ಹಾರಿಸಿದ್ದ ಗುಂಡು ತಗುಲಿ ವ್ಯಕ್ತಿಯೊಬ್ಬರು ಗಾಯಗೊಂಡ ಘಟನೆ ಮಂಗಳವಾರ ಮಧ್ಯಾಹ್ನ‌ 12 ಸಿದ್ದಾಪುರ ಸಮೀಪದ ಆನಂದಪುರ ಸಮೀಪದ ಪುಲಿಯೇರಿಯಲ್ಲಿ ನಡೆದಿತ್ತು.

ಬಂದೂಕಿನಿಂದ ಗುಂಡು ಸ್ಫೋಟಿಸಿ ವ್ಯಕ್ತಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಸಿದ್ದಾಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆನಂದಪುರ ನಿವಾಸಿ ಅರವಿನ್ ಜೆರಾಲ್ಡ್ (51) ಬಂಧಿತ ಆರೋಪಿಯಾಗಿದ್ದಾರೆ.

 ಆನಂದಪುರ ನಿವಾಸಿ ಅನೇಸ್ಟ ಡಿ.ಕುಂಣಿ ಎಂಬವರು ತಮ್ಮ ಮನೆಯ ಹಿಂಭಾಗಕ್ಕೆ ಸೌದೆ ತರುತ್ತಿದ್ದ ಸಂದರ್ಭ ತೋಟದ ಒಳಗಿನಿಂದ ಗುಂಡು ಹಾರಿ ಅನೇಸ್ಟ ಅವರ ಎದೆ, ಕಾಲು, ಕೈ ಸೊಂಟದ ಭಾಗಕ್ಕೆ ಹೊಕ್ಕಿ ಗಾಯಗಳಾಗಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಈ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡ ಪೊಲೀಸರು ಆನಂದಪುರ ನಿವಾಸಿ ಜೆರಾಲ್ಡ್ ಅರವಿಂದ್ (51) ಎಂಬವರನ್ನು ಬಂಧಿಸಿದ್ದಾರೆ. ಆರೋಪಿಯು ತಾನು ಪಕ್ಷಿಗೆ ಗುಂಡು ಹಾರಿಸಿದ್ದು, ಇದು ಪಕ್ಕದ ಮನೆಯ ನಿವಾಸಿ ಅನೇಸ್ಟ ಎಂಬುವರಿಗೆ ತಗುಲಿದೆ ಎಂದು ಪೊಲೀಸರ ಬಳಿ ತಷ್ಟೊಪ್ಪಿಕೊಂಡಿದ್ದಾರೆ. ಬಂದೂಕನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

What's Your Reaction?

Like Like 2
Dislike Dislike 0
Love Love 0
Funny Funny 0
Angry Angry 2
Sad Sad 2
Wow Wow 0