ಸಿದ್ದಾಪುರ:ಗಿಡದಿಂದ ಕಾಫಿ ಕದ್ದ ಕಳ್ಳರು: ಇಬ್ಬರ ಬಂಧನ

Dec 29, 2025 - 08:34
 0  3k
ಸಿದ್ದಾಪುರ:ಗಿಡದಿಂದ ಕಾಫಿ ಕದ್ದ ಕಳ್ಳರು:  ಇಬ್ಬರ ಬಂಧನ
ಬಂಧಿತ ಆರೋಪಿಗಳು

ಸಿದ್ದಾಪುರ:- ವಿರಾಜಪೇಟೆ ತಾಲೂಕಿನ ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಡಗ ಬಾಣಂಗಾಲದ ಎಲ್ಕಿನ್ ಎಸ್ಟೇಟ್ ನಲ್ಲಿ ಗಿಡದಿಂದ ಕಾಫಿ ಕಳವು ಮಾಡಿರುವುದಾಗಿ ವ್ಯವಸ್ಥಾಪಕ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೋಲಿಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಪ್ರಕರಣ ಬೇಧಿಸುವಲ್ಲಿ ಯಶಸ್ಟಿಯಾಗಿದ್ದಾರೆ.

 ತೋಟದ ವ್ಯವಸ್ಥಾಪಕ ಕಾವೇರಪ್ಪ ಸಿಬ್ಬಂದಿ ವಿಜೇಶ್ ಯೊಂದಿಗೆ ಡಿ. 27ರ ಸಂಜೆ 2.30ರ ಸುಮಾರಿಗೆ ತೋಟದಲ್ಲಿ ಗಸ್ತು ನಡೆಸುವ ಸಂದರ್ಭದಲ್ಲಿ ಆರ್ಗನಿಕ್ಜೀಬಿ ಬ್ಲಾಕ್ ಬಳಿ ರಸ್ತೆಯ ಬದಿ ಸ್ಕೂಟಿಯೊಂದು ನಿಂತಿರುವುದು ಕಂಡು ಅನುಮಾನ ಗೊಂಡ ಸಿಬ್ಬಂದಿ ತೋಟದೊಳಗೆ ನೋಡಿದಾಗ ಯಾರೋ ಇಬ್ಬರು ಗಿಡದಿಂದಲೆ ಕಾಫಿ ಕಿತ್ತು ಚೀಲಕ್ಕೆ ತುಂಬುವುದನ್ನು ಗಮನಿಸಿ ಸ್ಥಳಕ್ಕೆ ತೆರಳಿದ ಸಂದರ್ಭ ಕಳ್ಳರು ತೋಟದೊಳಗೆ ಓಡಿ ಪರಾರಿಯಾಗಿದ್ದಾರೆ.

 ತಕ್ಷಣಕ್ಕೆ ಸ್ಥಳಕ್ಕೆ ಹೋಗಿ ನೋಡಿದಾಗ ಎರಡು ಪ್ಲಾಸ್ಟಿಕ್ ಚೀಲದಲ್ಲಿ ಅದಾಜು 100 ಕೆ. ಜಿ ಕಾಫಿ ಕುಯ್ದಿರುವುದು ಕಂಡು ಬಂದಿದ್ದು,ಈ ಸಂಬಂಧ ಹಿರಿಯ ವ್ಯವಸ್ಥಾಪಕ ಪವನ್ ಗೆ ಮಾಹಿತಿ ನೀಡಲಾಗಿದ್ದು ಕೂಡಲೆ ಸಂಬಂಧ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.

ತಕ್ಷಣ ಕಾರ್ಯಾಚರಣೆ ನಡೆಸಿದ ಪೋಲಿಸ್ ಅಧಿಕಾರಿಗಳು ಸ್ಥಳದಲ್ಲಿ ಇದ್ದ ಸ್ಕೂಟಿ ಕೆ. ಎ.12 ಎಕ್ಸ್ 2260 ಅನ್ನು ವಶಕ್ಕೆ ಪಡೆದಿದ್ದು ತನಿಖೆ ನಡೆಸಿ ಬಾಡಗ ಬಾಣಂಗಾಲದ ನಿವಾಸಿಗಳಾದ ಆರೋಪಿಗಳಾದ ಅನ್ಸಾರ್ ( 34)ಮತ್ತು ಶಕೀರ್ (27)ಎಂಬವರನ್ನು ಬಂದಿಸಲಾಗಿದೆ. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಮಂಜುನಾಥ್, ಎ. ಎಸ್. ಐ ಗಳಾದ ರಾಜೇಶ್ ಮತ್ತು ಶ್ರೀನಿವಾಸ್ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

What's Your Reaction?

Like Like 7
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0