ಸೋಮವಾರಪೇಟೆ; ಗುಂಡು ಹೊಡೆದುಕೊಂಡು ವ್ಯಕ್ತಿ ಆತ್ಮಹತ್ಯೆ
ಸೋಮವಾರಪೇಟೆ;ಗುಂಡು ಹೊಡೆದುಕೊಂಡು ವೃದ್ಧ ಆತ್ಮಹತ್ಯೆ ಸೋಮವಾರಪೇಟೆ ತಾಲ್ಲೂಕಿನ ನಡ್ಲುಕೊಪ್ಪ ಗ್ರಾಮದಲ್ಲಿ ನಡೆದಿದೆ. ಟಿ ಕೆ ಸುಬ್ಬಯ್ಯ (78) ಮೃತ ದುರ್ದೈವಿ.
ತೋಳೂರು ಶೆಟ್ಟಳ್ಳಿ ಗ್ರಾಮ ಪಂಚಾಯಿತಿಯ ನಡ್ಲುಕೊಪ್ಪ ಗ್ರಾಮದಲ್ಲಿ ದುರ್ಘಟನೆ ನಡೆದಿದ್ದು, ಅನಾರೋಗ್ಯದ ಹಿನ್ನಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದ್ದೆ. ಕೆಲ ತಿಂಗಳಿನಿಂದ ಕಾಲು ನೋವಿನಿಂದ ಬಳಲುತ್ತಿದ್ದ ಟಿ.ಕೆ ಸುಬ್ಬಯ್ಯ ಅವರು, ಇಂದು ಮುಂಜಾನೆ ಆರು ಗಂಟೆಗೆ ಮನೆಯ ಬಳಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.ಸ್ಥಳಕ್ಕೆ ಸೋಮವಾರಪೇಟೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.
What's Your Reaction?
Like
0
Dislike
1
Love
0
Funny
1
Angry
0
Sad
1
Wow
0
