ರಾಷ್ಟ್ರೀಯ ಮಟ್ಟದ ಅಬ್ಯಾಕಸ್ ಮತ್ತು ವೇದ ಗಣಿತ ಚಾಂಪಿಯನ್‍ಶಿಪ್‍ನಲ್ಲಿ ಕೊಡಗು ಜಿಲ್ಲೆಗೆ ಕೀರ್ತಿ ತಂದ ಪುಟ್ಟ ಬಾಲೆ ವಿರಾಜಪೇಟೆಯ ಸ್ರಿಹ ಸುರೇಶ್

Jan 22, 2026 - 10:11
 0  490
ರಾಷ್ಟ್ರೀಯ ಮಟ್ಟದ ಅಬ್ಯಾಕಸ್ ಮತ್ತು ವೇದ ಗಣಿತ ಚಾಂಪಿಯನ್‍ಶಿಪ್‍ನಲ್ಲಿ ಕೊಡಗು ಜಿಲ್ಲೆಗೆ ಕೀರ್ತಿ ತಂದ ಪುಟ್ಟ ಬಾಲೆ ವಿರಾಜಪೇಟೆಯ ಸ್ರಿಹ ಸುರೇಶ್

ವಿರಾಜಪೇಟೆ: ಎನ್‍ಎಸ್‍ಡಿಸಿ ಸ್ಕಿಲ್ ಇಂಡಿಯಾದ ಅನುಮೋದಿತ ತರಬೇತಿ ಪಾಲುದಾರ ಆವಾಸ್(ಎವಿಎಎಸ್)ನಿಂದ ಆಯೋಜಿಸಲ್ಪಟ್ಟ 14ನೇ ರಾಷ್ಟ್ರೀಯ ಮಟ್ಟದ ಚಾಂಪಿಯನ್‍ಶಿಪ್ 2025 ರಲ್ಲಿ, ರಾಷ್ಟ್ರೀಯ ಮಟ್ಟದ ಅಬ್ಯಾಕಸ್ ಮತ್ತು ವೇದ ಗಣಿತ ಚಾಂಪಿಯನ್‍ಶಿಪ್‍ನಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿ ವಿರಾಜಪೇಟೆಯ ಸ್ರಿಹ ಸುರೇಶ್ ಹೊರಹೊಮ್ಮಿದ್ದಾರೆ.

ಬೀಡ್ಸ್ ಅಂಡ್ ಬ್ರೈನ್ ವಿಭಾಗದಲ್ಲಿ ಅಭ್ಯಾಸಿದ ಸ್ರಿಹ ಸುರೇಶ್ 100 ಪ್ರಶ್ನೆಗಳಲ್ಲಿ 100ಕ್ಕೂ 5 ನಿಮಿಷ 14 ಸೆಕೆಂಡ್‍ನಲ್ಲಿ ಉತ್ತರಿಸಿ ರಾಷ್ಟ್ರ ಮಟ್ಟದಲ್ಲಿ ಚಾಂಪಿಯನ್ ಆಗಿ ಕೊಡಗಿಗೆ ಕೀರ್ತಿ ತಂದಿದ್ದಾರೆ. ಇವರಿಗೆ ಶಿಕ್ಷಕರಾದ ದೇಚಮ್ಮ ಅವರು ತರಬೇತಿ ನೀಡಿದ್ದಾರೆ. ಐದೂವರೆ ವರ್ಷದ ಈ ಪುಟ್ಟ ಬಾಲಕಿ ವಿರಾಜಪೇಟೆಯ ಸ್ಯಾಪಲಿಂಗ್ ಮಾಂಟೆಸ್ಸರಿಯಲ್ಲಿ ಯುಕೆಜಿಯಲ್ಲಿ ಅಭ್ಯಾಸ ಮಾಡುತ್ತಿದ್ದಾಳೆ. ಶ್ರಿಹ ಸುರೇಶ್ ವಿರಾಜಪೇಟೆಯ ಸಕ್ಸಸ್ ಮೆನ್ಸ್ ಹಬ್ ಮಾಲೀಕ ಸುರೇಶ್ ಹಾಗೂ ಸೌಮ್ಯ ಅವರ ಪುತ್ರಿ.

What's Your Reaction?

Like Like 1
Dislike Dislike 0
Love Love 2
Funny Funny 0
Angry Angry 0
Sad Sad 0
Wow Wow 1