Sports News

ಕಣ್ಣೂರಿನಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ; ವಾಲಿಬಾಲ್ ಪಂದ್ಯಾವಳಿಯಲ್ಲಿ ಕೊಡಗು ಪತ್ರಕರ್ತರ ಸಂಘ ಗೆಲುವು

admincoorgdaily

ಕಣ್ಣೂರಿನಲ್ಲಿ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ; ವಾಲಿಬಾಲ್ ಪಂದ್ಯಾವಳಿಯಲ್ಲಿ ಕೊಡಗು ಪತ್ರಕರ್ತರ ಸಂಘ ಗೆಲುವು

ಕಣ್ಣೂರು: ಪತ್ರಕರ್ತರ ಒಕ್ಕೂಟ, ಕಣ್ಣೂರು ಪ್ರೆಸ್ ಕ್ಲಬ್ ಹಾಗೂ ತುಳಸಿ ಭಾಸ್ಕರನ್ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ 7ನೇ ವರ್ಷದ ರಾಜ್ಯಮಟ್ಟದ ಪತ್ರಕರ್ತರ ವಾಲಿಬಾಲ್ ಪಂದ್ಯಾವಳಿ ಕಣ್ಣೂರು ಕೃಷ್ಣ ಮೆನನ್ ಮಹಿಳಾ ಕಾಲೇಜು ಒಳಗಣ ಕ್ರೀಡಾಂಗಣದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಪತ್ರಕರ್ತರು ಸೇರಿದಂತೆ ತಮಿಳುನಾಡು, ಕೊಡಗು, ಕೇರಳ ತಂಡಗಳ ನಡುವೆ ವಾಲಿಬಾಲ್ ಪ್ರದರ್ಶನ ಪಂದ್ಯಾವಳಿ ನಡೆಯಿತು ಕೊಡಗು ಪತ್ರಕರ್ತರ ಸಂಘ ಹಾಗೂ ಕಣ್ಣೂರು ಪ್ರಸ್ ಕ್ಲಬ್ ನಡುವೆ ನಡೆದ ರೋಮಾಂಚನಕಾರಿ ಲೀಗ್ ವಾಲಿಬಾಲ್ ಪಂದ್ಯಾವಳಿಯ ಅಂತಿಮ ಸುತ್ತಿನಲ್ಲಿ ಕಣ್ಣೂರು ಪ್ರಕರ್ತರ ತಂಡವನ್ನು ಮಣಿಸಿ ಕೊಡಗು ಪತ್ರಕರ್ತರ ತಂಡ ಗೆಲುವು ಸಾಧಿಸಿತು.

ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಜಿ ವಿ ರವಿಕುಮಾರ್ ನೇತ್ರತ್ವದಲ್ಲಿ ಎಸ್ಎಂ ಮುಬಾರಕ್ ,ವಿನೋದ್ ಮೂಡುಗದ್ದೆ, ಸೈನುಲ್ಲಾ, ಮೋಹನ್, ಖಲೀಲ್, ಸುರೇಶ್ ಪೂಜಾರಿ , ಅಶ್ರಫ್, ದೀಪಕ್ ಪಾಲ್ಗೊಂಡಿದ್ದರು.

 ಕಣ್ಣೂರು ಶಾಸಕರುಗಳಾದ ಟಿ.ಒ. ಮೋಹನ್, ಗೊವಿಂದನ್ , ಬಿಜು, ಮಾಜಿ ಶಾಸಕ ಕಡನಪಲ್ಲಿ ರಾಮಚಂದ್ರನ್, ಕಣ್ಣೂರು ಜಿಲ್ಲಾಧಿಕಾರಿ ಪಿ. ವಿಷ್ಣು ರಾಜ್ , ಉಪ ಮೇಯರ್ ಕೆ.ಪಿ. ತಾಹಿರ್, ಚೇಂಬರ್ ಅಧ್ಯಕ್ಷ ಸಚಿನ್ ಸೂರ್ಯಕಾಂತ್, ಸಿ.ಪಿ. ಸುರೇಂದ್ರನ್, ಜನರಲ್ ಕನ್ವೀನರ್ ಕೆ.ಎನ್. ಬಾಬು, ಶೆಮಿರ್ ಉರ್ಪಳ್ಳಿ ,ಪ್ರೆಸ್ ಕ್ಲಬ್ ಅಧ್ಯಕ್ಷ ಸಿ. ಸುನಿಲ್‌ಕುಮಾರ್, ಕಾರ್ಯದರ್ಶಿ ಕಬೀರ್ ಕನ್ನಡಿ ಪರಂಬಲ್ ಮತ್ತು ರಾಜ್ಯ ಸಮಿತಿ ಸದಸ್ಯ ಪ್ರಶಾಂತ್ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗಣ್ಯರು ಪಾಲ್ಗೊಂಡು ಕೊಡಗು ಪತ್ರಕರ್ತರ ತಂಡಕ್ಕೆ ಬಹುಮಾನ ವಿತರಿಸಿದರು.