ಸೋಮವಾರಪೇಟೆ ಜೆಸಿಐ ಪುಷ್ಪಗಿರಿ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ

Feb 6, 2026 - 17:10
 0  376
ಸೋಮವಾರಪೇಟೆ ಜೆಸಿಐ ಪುಷ್ಪಗಿರಿ ನೂತನ ಸಾಲಿನ ಪದಾಧಿಕಾರಿಗಳ ಪದಗ್ರಹಣ

ಸೋಮವಾರಪೇಟೆ: ಜೆಸಿಐ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆಯ 2026ರ ಪದಗ್ರಹಣ ಕಾರ್ಯಕ್ರಮ ಈಚೆಗೆ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು.

ವಲಯ 14ರ ಅಧ್ಯಕ್ಷ ಪ್ರಜ್ವಲ್ ಎಸ್ ಜೈನ್ ಪದಗ್ರಹಣ ನೆರವೇರಿಸಿದರು. ನಂತರ ಅವರು ಮಾತನಾಡಿ, ಜೇಸಿ ಸಂಸ್ಥೆ ಯುವಕರಲ್ಲಿ ನಾಯಕತ್ವ, ಸೇವಾಭಾವನೆ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪ್ರಮುಖ ವೇದಿಕೆಯಾಗಿದ್ದು, ಸಮಾಜಮುಖಿ ಚಟುವಟಿಕೆಗಳ ಮೂಲಕ ಉತ್ತಮ ನಾಯಕರನ್ನು ರೂಪಿಸುತ್ತದೆ ಎಂದರು.

ಈ ಸಂದರ್ಭ ವಲಯ ಉಪಾಧ್ಯಕ್ಷ ಬಿ.ಎಂ. ಜಗತ್, ನಿಕಟಪೂರ್ವ ಅಧ್ಯಕ್ಷೆ ಜಗದಾಂಬ ಗುರುಪ್ರಸಾದ್, ನೂತನ ಸಾಲಿನ ಅಧ್ಯಕ್ಷೆ ಮಂಜುಳಾ ಸುಬ್ರಮಣಿ, ಪ್ರಧಾನ ಕಾರ್ಯದರ್ಶಿ ಜ್ಯೋತಿ ರಾಜೇಶ್, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಜ, ಖಜಾಂಚಿ ಪವಿತ್ರ ಲಕ್ಷ್ಮಿ ಕುಮಾರ್, ಜೂನಿಯರ್ ಜೇಸಿ ಅಧ್ಯಕ್ಷೆ ಭಾವನ್ಯ ಸೇರಿದಂತೆ ಪದಾಧಿಕಾರಿಗಳು ಇದ್ದರು.

What's Your Reaction?

Like Like 0
Dislike Dislike 0
Love Love 1
Funny Funny 0
Angry Angry 0
Sad Sad 1
Wow Wow 0