ಶಾಸಕರನ್ನು ತೇಜೋವಧೆ ಮಾಡುವವರಿಗೆ ಕ್ಷೇತ್ರದಲ್ಲಿ‌‌ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳೇ ತಕ್ಕ ಉತ್ತರ : ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೈಸಿ ಕತ್ತಣಿರ

ಶಾಸಕರನ್ನು ತೇಜೋವಧೆ ಮಾಡುವವರಿಗೆ ಕ್ಷೇತ್ರದಲ್ಲಿ‌‌ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳೇ ತಕ್ಕ ಉತ್ತರ : ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೈಸಿ ಕತ್ತಣಿರ
ಮೈಸಿ ಕತ್ತಣಿರ

ಮಡಿಕೇರಿ; ಶಾಸಕರಾದ ಡಾ.ಮಂತರ್ ಗೌಡ ಅವರು ಅಭಿವೃದ್ಧಿ ಕೆಲಸದ‌ ಮೂಲಕ ಮಡಿಕೇರಿ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಶಾಸಕರ ಅಭಿವೃದ್ಧಿ ಕೆಲಸಗಳನ್ನು ಸಹಿಸಲು ಸಾಧ್ಯವಾಗದೆ,ಹಿಂದೂ ಸಂಗಮ ಶೋಭಯಾತ್ರೆಯಲ್ಲಿ ಭಾಗವಹಿಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರನ್ನು ತೇಜೋವಧೆ ಮಾಡುವವರಿಗೆ ಕ್ಷೇತ್ರದಲ್ಲಿ‌‌ ನಡೆಯುತ್ತಿರುವ ಅಭಿವೃದ್ಧಿ ಕೆಲಸಗಳೇ ತಕ್ಕ ಉತ್ತರ ಎಂದು ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೈಸಿ ಕತ್ತಣಿರ ಅವರು ಹೇಳಿದ್ದಾರೆ.

 ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು,ಶಾಸಕ‌ ಡಾ.ಮಂತರ್ ಗೌಡ ಅವರು ಹಿರಿಯರು,ಕಿರಿಯರನ್ನು ಗೌರವಿಸುತ್ತಾ ಎಲ್ಲರೊಂದಿಗೂ ಸರಳತೆಯಿಂದ ನಡೆದುಕೊಳ್ಳುವ ವ್ಯಕ್ತಿತ್ವ ಹೊಂದಿರುವವರು.ಹಿಂದೂ, ಮುಸ್ಲಿಮ್,ಕ್ರಿಶ್ಚಿಯನ್ ಈಗೇ ಎಲ್ಲಾ ಜಾತಿ,ಧರ್ಮ,ಜನಾಂಗಗಳ ಆಚಾರ,ವಿಚಾರಗಳನ್ನು ಗೌರವಿಸಿ,ಅವರ ಧಾರ್ಮಿಕ ಕಾರ್ಯಕ್ರಮಗಳು,ಕ್ರೀಡಾಕೂಟಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಕುಶಾಲನಗರದಲ್ಲಿ ನಡೆದ ಹಿಂದೂ ಸಂಗಮ ಶೋಭಯಾತ್ರೆಯಲ್ಲಿ ಶಾಸಕರಾದ ಡಾ.ಮಂತರ್ ಗೌಡ ಅವರು ಹಿಂದೂ ಬಾಂಧವರನ್ನು ಮಾತನಾಡಿಸಿ, ಶುಭಹಾರೈಸಿದ್ದಾರೆ.

ಶಾಸಕರು ಹಿಂದೂ ಸಂಗಮ ಶೋಭಯಾತ್ರೆಗೆ ಶುಭಕೋರಿರುವುದು ಪಕ್ಷದ ಯಾವುದೇ ಮುಖಂಡರು,ಕಾರ್ಯಕರ್ತರಿಗೆ ಅಸಮಾಧಾನ ಅಥವಾ ನೋವಾಗಿಲ್ಲ. ಆದರೆ ಈ ವಿಷಯವನ್ನೇ ಮುಂದಿಟ್ಟುಕೊಂಡು ಕೆಲವರು ಶಾಸಕರನ್ನು ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಮಾಡುತ್ತಿದ್ದಾರೆ. ಶಾಸಕರ ಜನಪ್ರಿಯತೆಯನ್ನು ಕಂಡು,ಸಹಿಸಿಕೊಳ್ಳಲು ಸಾಧ್ಯವಾಗದವರು ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ಮಾಡುತ್ತಿರುವುದನ್ನು ಮೈಸಿ ಕತ್ತಣಿರ ಅವರು ಖಂಡಿಸಿದ್ದಾರೆ.

 ಶಾಸಕರಾದ ಡಾ.ಮಂತರ್ ಗೌಡ ಅವರು ಎಲ್ಲಾ ಜಾತಿ,ಧರ್ಮಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರಿಗೆ ಪ್ರೋತ್ಸಾಹ ಹಾಗೂ ಬೆಂಬಲವನ್ನು ನೀಡುತ್ತಾ ಜಿಲ್ಲೆಯಲ್ಲಿ ಎಲ್ಲಾ ಜಾತಿ,ಧರ್ಮದವರ ಪ್ರೀತಿಗೆ ಪಾತ್ರರಾಗಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಕಳೆದ 25 ವರ್ಷಗಳ ನಂತರ ಶಾಸಕರಾದ ಎಎಸ್ ಪೊನ್ನಣ್ಣ ಹಾಗೂ ಡಾ.ಮಂತರ್ ಗೌಡ ಅವರು ಸೌಹಾರ್ದತೆಯ ವಾತಾವರಣವನ್ನು ಸೃಷ್ಟಿಸಿ,ಅಭಿವೃದ್ಧಿಯತ್ತ ಕ್ಷೇತ್ರವನ್ನು ಕೊಂಡೊಯ್ಯುತ್ತಿರುವ ಶಾಸಕರನ್ನು ತೋಜೋವಧೆ ಮಾಡುವವರಿಗೆ ಕಾಲವೇ ಉತ್ತರ ಕೊಡಲಿದೆ.ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕರು ಗೆಲುವು ಸಾಧಿಸಿದ ಬಳಿಕ‌ ಅಭಿವೃದ್ಧಿಯಲ್ಲಿ ‌ಕೊಡಗು ಇಡೀ ಕರ್ನಾಟಕಕ್ಕೆ ಮಾದರಿಯಾಗಿದೆ ಎಂದು ಮೈಸಿ ಕತ್ತಣಿರ ಅವರು ಪತ್ರಿಕಾ‌ ಪ್ರಕಟಣೆಯಲ್ಲಿ ಹೇಳಿದ್ದಾರೆ.