Kodagu

ಮಹಾಶಿವರಾತ್ರಿ ಉತ್ಸವ ಪ್ರಯುಕ್ತ ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ಫೆ.7 ರಿಂದ ಫೆ.15 ವರೆಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ

admincoorgdaily

ಮಹಾಶಿವರಾತ್ರಿ ಉತ್ಸವ ಪ್ರಯುಕ್ತ ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ಫೆ.7 ರಿಂದ ಫೆ.15 ವರೆಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ

ಮಡಿಕೇರಿ: ಮಹಾಶಿವರಾತ್ರಿ ಉತ್ಸವ ಪ್ರಯುಕ್ತ ಮೇಕೇರಿಯ ಶ್ರೀ ಗೌರಿಶಂಕರ ದೇವಾಲಯದಲ್ಲಿ ಫೆ.೭ ರಿಂದ ಫೆ.೧೫ರ ವರೆಗೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆಯಲಿದೆ ಎಂದು ದೇವಾಲಯದ ಅಧ್ಯಕ್ಷ ಕೆ.ಕೆ.ಪೂವಯ್ಯ ತಿಳಿಸಿದ್ದಾರೆ. ಫೆ.೭ ರಂದು ಬೆಳಿಗ್ಗೆ ೯.೩೦ ಗಂಟೆಗೆ ಧ್ವಜಾರೋಹಣ ನಡೆಯಲಿದೆ.

ಫೆ.೮ ರಿಂದ ೧೪ರ ಪ್ರತಿ ಸಂಜೆ ೬ ಗಂಟೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಫೆ.೧೫ ರಂದು ಮಹಾಶಿವರಾತ್ರಿಯ ಪ್ರಯುಕ್ತ ಬೆಳಿಗ್ಗೆ ೮ ಗಂಟೆಗೆ ಶ್ರೀ ಗಣಪತಿ ಹೋಮ ನಡೆಯಲಿದೆ. ನಂತರ ದೇವಾಲಯದ ವಿಶಿಷ್ಟ ಸೇವೆಯಾದ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ.

 ಜಾಗರಣೆಯ ಮೂಲಕ ಆರಾಧಿಸಲು ಮಲ್ಲ ದುರ್ಗಾ ಪರಮೇಶ್ವರಿ ಯಕ್ಷಗಾನ ಮಂಡಳಿ ಕಾಸರಗೋಡು ಇವರಿಂದ ಕೊಲ್ಲೂರು ಮೂಕಾಂಬಿಕಾ ಕಥಾ ಪ್ರಸಂಗ ನಡೆಯಲಿದೆ. ಫೆ.೧೬ರಂದು ಬೆಳಗ್ಗೆ ೧೧ ಗಂಟೆಗೆ ಧಾರ್ಮಿಕ ಉಪನ್ಯಾಸ ದೇವಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ದೇವಾಲಯ ಆಡಳಿತ ಮಂಡಳಿಯ ಪ್ರಮುಖರಾದ ಧಾಮೋದರ್, ರತ್ನಾಕರ್ ರೈ, ಲೋಕೇಶ್, ಬೆಳ್ಯಪ್ಪ, ಈಶ್ವರ್ ಇದ್ದರು.