ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 24ನೇ ಶಾಖೆ ಫೆ.15ರಂದು ಮೂರ್ನಾಡಿನಲ್ಲಿ ಪ್ರಾರಂಭ

ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 24ನೇ ಶಾಖೆ ಫೆ.15ರಂದು ಮೂರ್ನಾಡಿನಲ್ಲಿ ಪ್ರಾರಂಭ

ಮಡಿಕೇರಿ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ೨೪ನೇ ನೂತನ ಶಾಖೆ ಫೆ.೧೫ರಂದು ಮೂರ್ನಾಡಿನಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಸುಳ್ಯ ತಾಲ್ಲೂಕಿನ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ.ಸಿ.ಸದಾನಂದ ತಿಳಿಸಿದ್ದಾರೆ.

ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ, ಸುಳ್ಯದ ನೂತನ ೨೪ನೇ ಶಾಖೆಯು ಮೂರ್ನಾಡ್‌ನಲ್ಲಿ ೧೫ನೇ ಫೆಬ್ರವರಿ ೨೦೨೬ ರ ಬೆಳಿಗ್ಗೆ ಗಂಟೆ ೧೦:೩೦ಕ್ಕೆ ಮೂರ್ನಾಡ್‌ನ ಮೊದಲನೇ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ.

 ಹಾಗೂ ಸಭಾ ಕಾರ್ಯಕ್ರಮ ಮೂರ್ನಾಡಿನ ಗೌಡ ಸಮಾಜ ನಡೆಯಲಿದೆ. ವಿಧಾನಸಭಾ ಕ್ಷೇತ್ರದ ಶಾಸಕರಾದ ಮಂತರ್ ಗೌಡರವರು ನೆರವೇರಿಸಲಿದ್ದಾರೆ. ದೀಪ ಪ್ರಜ್ವಲನೆಯನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ.

 ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿ. ಸುಳ್ಯ ೧೯೯೭ ರಲ್ಲಿ ಗೌಡರ ಯುವ ಸೇವಾ ಸಂಘ (ರಿ) ಸುಳ್ಯ ಇವರಿಂದ ಪ್ರವರ್ತಿಸಲ್ಪಟ್ಟಿದ್ದು, ೯-೨-೧೯೯೮ ರಲ್ಲಿ ೪೩೫ ಸದಸ್ಯರಿಂದ ಪ್ರಾರಂಭವಾದ ಈ ಸಹಕಾರ ಸಂಘದಲ್ಲಿ ಪ್ರಸ್ತುತ ೨೨,೫೦೦ ಸದಸ್ಯರಿದ್ದು, ಇವರಿಂದ ರೂ ೫.೪೩ ಕೋಟಿ ಪಾಲು ಬಂಡವಾಳ ಸಂಗ್ರಹಿಸಿದೆ.

ಸದಸ್ಯರ ಅನುಕೂಲಕ್ಕಾಗಿ ವಾಹನ ಸಾಲ, ಚಿನ್ನಾಭರಣ ಈಡಿನ ಸಾಲ, ಭದ್ರತಾ ಸಾಲ, ಚಿನ್ನ ಖರೀದಿ ಸಾಲ, ಗೃಹಸಾಲ, ವಾಣಿಜ್ಯ ಕಟ್ಟಡ ಸಾಲ, ಜಮೀನು ಖರೀದಿ ಸಾಲ, ಜಮೀನು ಅಡವು ಸಾಲ, ವೇತನ ಸಾಲ, ವ್ಯಾಪಾರ ಸಾಲ ಹಾಗೂ ಜಾಮೀನು ಸಾಲಗಳನ್ನು ನೀಡುತ್ತಿದ್ದು ಹಾಗೇಯೇ ಇ-ಸ್ಟಾಂಪಿಂಗ್ ವಿತರಣೆ, ಆರ್‌ಟಿಜಿಎಸ್/ನೆಫ್ಟ್ ಸೌಲಭ್ಯವನ್ನು ನೀಡುತ್ತಿದ್ದೇವೆ. ಸಂಸ್ಥೆಯ ಕಾರ್ಯವ್ಯಾಪ್ತಿಯು ರಾಜ್ಯಮಟ್ಟದ್ದಾಗಿದ್ದು, ಸಂಘವು ಈಗಾಗಲೇ ರಾಜ್ಯದ ವಿವಿಧ ಭಾಗಗಳಲ್ಲಿ ೨೩ ಶಾಖೆಗಳನ್ನು ಆರಂಭಿಸಿ ವ್ಯವಹಾರ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

 ಸುದ್ದಿಗೋಷ್ಠಿಯಲ್ಲಿ ಸುಳ್ಯದ ವೆಂಕಟರಮಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಸಿಇಒ ವಿಶ್ವನಾಥ್, ಉಪಾಧ್ಯಕ್ಷ ದಿನೇಶ್ ಮಡಪ್ಪಾಡಿ, ಪ್ರಮುಖರಾದ ಸದಾನಂದ ಮಾವಜಿ, ದಾಮೋದರ್ , ಅಶೋಕ್ ಇದ್ದರು.