ಫೆ.15ರಂದು ರಾಮಾಂಜನೇಯ ಭಜನಾ ಮಂಡಳಿ ವತಿಯಿಂದ ಶಿವರಾತ್ರಿ ಪ್ರಯುಕ್ತ ಮಡಿಕೇರಿ ನಗರದಲ್ಲಿ 2ನೇ ವರ್ಷದ ನಗರ ಸಂಕೀರ್ತನೆ ಕಾರ್ಯಕ್ರಮ

Feb 12, 2026 - 17:02
Feb 12, 2026 - 17:03
 0  138
ಫೆ.15ರಂದು ರಾಮಾಂಜನೇಯ ಭಜನಾ ಮಂಡಳಿ ವತಿಯಿಂದ ಶಿವರಾತ್ರಿ ಪ್ರಯುಕ್ತ ಮಡಿಕೇರಿ ನಗರದಲ್ಲಿ 2ನೇ ವರ್ಷದ ನಗರ ಸಂಕೀರ್ತನೆ ಕಾರ್ಯಕ್ರಮ

ಮಡಿಕೇರಿ: ರಾಮಾಂಜನೇಯ ಭಜನಾ ಮಂಡಳಿ ವತಿಯಿಂದ ಶಿವರಾತ್ರಿ ಪ್ರಯುಕ್ತ ಮಡಿಕೇರಿ ನಗರದಲ್ಲಿ ೨ನೇ ವರ್ಷದ ನಗರ ಸಂಕೀರ್ತನೆ ಕಾರ್ಯಕ್ರಮ ಫೆ.೧೫ರಂದು ಹಮ್ಮಿಕೊಳ್ಳಲಾಗಿದ್ದು, ನಗರದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕಾರ್ಯಕ್ರಮದ ಸಂಚಾಲಕರಾದ ಮಹೇಶ್ ಕುಮಾರ್ ಮನವಿ ಮಾಡಿದ್ದಾರೆ.

ರಾಮಾಂಜನೇಯ ಭಜನಾ ಮಂಡಳಿ, ಶೃತಿಲಯ ಭಜನ ಮಂಡಳಿ, ವಿಜಯವಿನಾಯಕ ಭಜನಾ ಮಂಡಳಿ, ಕೋದಂಡರಾಮ ಭಜನಾ ಮಂಡಳಿ, ಶ್ರೀ ಮುತ್ತಪ್ಪ ಭಜನಾ ಮಂಡಳಿ, ಚೌಡೇಶ್ವರಿ ಭಜನಾ ಮಂಡಳಿ, ಕನ್ನಿಕಾ ಪರನೇಶ್ವರಿ ಭಜನಾ ಮಂಡಳಿ, ವನಚಾಮುಂಡಿ ಭಜನಾ ಮಂಡಳಿ, ಶ್ರೀ ಪ್ರಸನ್ನ ಗಣಪತಿ ಭಜನಾ ಮಂಡಳಿ, ವೆಂಕಟೇಶ್ವರ ಕಲಾ ತಂಡ ಅಶೋಕಪುರ ಸೇರಿದಂತೆ ವಿವಿಧ ಸಂಘಟನೆ ಸೇರಿದಂತೆ ೨೫ತಂಡಗಳು ಪಾಲ್ಗೊಳ್ಳಲಿದೆ.

ಅಂದು ಸಂಜೆ ನಗರದ ಕೋದಂಡರಾಮ ದೇವಸ್ಥಾನದಿಂದ ನಗರ ಸಂಕೀರ್ತನೆ ಕಾರ್ಯಕ್ರಮ ಆರಂಭವಾಗಿ ನಗರದ ಪ್ರಮುಖ ಬೀದಿಗಳಲ್ಲಿ ಕುಣಿತ ಭಜನೆ, ಭಜನೆಯ ಮೆರವಣಿಗೆ ಸಾಗಲಿದೆ ಎಂದು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಭಜನಕಾರರಾದ ವಿಶಾಲಾಕ್ಷಿ, ರಂಜನ್, ದಿನೇಶ್ ಕುಮಾರ್, ಚಂದ್ರಶೇಖರ್ ಇದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0