ವಿರಾಜಪೇಟೆ;ಮನೆಗೆ ನಡೆದುಕೊಂಡು‌ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ

Apr 5, 2026 - 10:09
 0  1.2k
ವಿರಾಜಪೇಟೆ;ಮನೆಗೆ ನಡೆದುಕೊಂಡು‌ ಹೋಗುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ
ಕಾಡಾನೆ

ವೀರಾಜಪೇಟೆ, ಏ. 4: ಮನೆಗೆ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆಯೊಂದು ಈ ಧಾಳಿ ನಡೆಸಿದ ಪರಿಣಾಮ ತೀವ್ರ ಗಾಯಗೊಂಡಿರುವ - ಘಟನೆ ನಡೆದಿದೆ. ತಾಲೂಕಿನ ಚೆಂಬೆಬೆಳ್ಳೂರುವಿನ ಪುದಕೋಟೆ ಗ್ರಾಮದ ಹೆಚ್. ಟಿ. ಹರೀಶ್ ಎಂಬವರೇ ಆನೆ ದಾಳಿಯಿಂದ ಗಾಯ ಗೊಂಡು ಪಾರಾಗಿ ಬಂದ ವ್ಯಕ್ತಿ.

ವೀರಾಜಪೇಟೆಗೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇವರು ರಾತ್ರಿ 9 ಗಂಟೆಗೆ ಗ್ರಾಮಕ್ಕೆ ತೆರಳುವಾಗ ದ್ವಿಚಕ್ರ ವಾಹನದಲ್ಲಿ ಹೋಗಲು ಅಸಾಧ್ಯವಾಗಿದ್ದರಿಂದ ತಮ್ಮ ವಾಹನವನ್ನು ರಸ್ತೆಯ ಬದಿ ನಿಲ್ಲಿಸಿ ಗದ್ದೆಯಲ್ಲಿ ಸ್ವಲ್ಪ ದೂರ ಮನೆ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ ರೆ ಕಾಡಾನೆಯೊಂದು ಬಂದು ಸೊಂಡಿಲಿನಿಂದ ಸೊಂಟಕ್ಕೆ ಗುದ್ದಿ ಬಲಗಾಲಿಗೆ ಮೆಟ್ಟಿದೆ. ಇದರಿಂದ ಹರೀಶ್ ಅವರ ಕಾಲಿನ ಮೂಳೆಗೆ ಬಲವಾಗಿ ಪೆಟ್ಟು - ಬಿದ್ದಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅರಣ್ಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು.

What's Your Reaction?

Like Like 0
Dislike Dislike 0
Love Love 2
Funny Funny 0
Angry Angry 1
Sad Sad 3
Wow Wow 0