ವಿರಾಜಪೇಟೆ: ಮರ ಕಪಾತ್ ಮಾಡುತ್ತಿದ್ದ ವೇಳೆ ಕಾರ್ಮಿಕ ಮರದಿಂದ ಬಿದ್ದು ಸಾವು

Feb 19, 2026 - 23:50
Feb 19, 2026 - 23:55
 0  2.2k
ವಿರಾಜಪೇಟೆ: ಮರ ಕಪಾತ್ ಮಾಡುತ್ತಿದ್ದ ವೇಳೆ ಕಾರ್ಮಿಕ ಮರದಿಂದ ಬಿದ್ದು ಸಾವು
ಮೃತಪಟ್ಟ ವ್ಯಕ್ತಿ

ವಿರಾಜಪೇಟೆ;ಫೆ19; ಕಾಫಿ ತೋಟದಲ್ಲಿ ಮರ ಕಪಾತ್ ಮಾಡುತಿದ್ದ ವೇಳೆ ಕಾರ್ಮಿಕ ಬಿದ್ದು ಸಾವಿಗೀಡಾದ ಘಟನೆ ವಿರಾಜಪೇಟೆ ನಲ್ವತೋಕ್ಲು ಗ್ರಾಮದಲ್ಲಿ ನಡೆದಿದೆ.

 ಪೊನ್ನಂಪೇಟೆ ತಾಲೂಕು ಜೋಡುಬೀಟಿ ನಿವಾಸಿ ಜೇನುಕುರುಬರ ಮಧು ಎಂಬುವವರ ಪುತ್ರ ಜೆ.ಎಂ. ರವಿ ( 32) ಮೃತನಾದ ವ್ಯಕ್ತಿ.

ಮೃತ ಕಾರ್ಮಿಕ ರವಿ ಇಂದು ಬೆಳಿಗ್ಗೆ ಮನೆಯಿಂದ ಚೋಕಂಡಳ್ಳಿ ನಲ್ವತೋಕ್ಲು ಗ್ರಾಮದ ಮುಸ್ತಫಾ ಎಂಬುವವರ ಕಾಫಿ ತೋಟಕ್ಕೆ ಕಪಾತ್ ಕೆಲಸಕ್ಕೆ ಆಗಮಿಸಿದ್ದ. ಕಾರ್ಮಿಕ ರವಿಗೆ ಮೂರ್ಛೆ ಕಾಯಿಲೆಗೆ ತುತ್ತಾಗಿದ್ದ ಎಂದು ಕುಟುಂಬ ಮೂಲಗಳಿಂದ ತಿಳಿದು ಬಂದಿದೆ.

ಮೃತ ವಿವಾಹಿತನಾಗಿದ್ದು ಖರ್ವರು ಪುಟ್ಟ ಮಕ್ಕಳನ್ನು ಹೊಂದಿದ್ದಾರೆ. ಇಂದು ಮಧ್ಯಾಹ್ನ 2-30 ರ ವೇಳೆಗೆ ಕರ್ತವ್ಯ ನಿರತರಾಗಿದ್ದ ಮರವನ್ನು ಕಪಾತ್ ಮಾಡುತಿದ್ದ ದಿಢೀರ್ ಎಂದು ಮೂರ್ಛೆ ರೋಗ ಉಲ್ಬಣಗೊಂಡ ಮರದಿಂದ ನೆಲಕ್ಕೆ ಉರುಳಿದ್ದಾನೆ. ತಕ್ಷಣವೇ ಸನಿಹದಲ್ಲಿದ್ದ ಇತರ ಕಾರ್ಮಿಕರು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ವೈದ್ಯರು ಪರೀಕ್ಷೆಗೆ ಒಳಪಡಿಸಿದ್ದಾರೆ.ತಲೆಗೆ ಪೆಟ್ಟಾದ ಪರಿಣಾಮ ಕಾರ್ಮಿಕ ಮೃತನಾಗಿದ್ದಾನೆ.ಎಂದು ತಿಳಿಸಿದ್ದಾರೆ. ಮೃತನ ಪತ್ನಿ ಜ್ಯೋತಿ ನೀಡಿರುವ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಮರಣ ಪ್ರಕರಣ ದಾಖಲಾಗಿದ್ದು ‌ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.

ವರದಿ;ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 1
Dislike Dislike 0
Love Love 1
Funny Funny 0
Angry Angry 0
Sad Sad 8
Wow Wow 0