ವಿರಾಜಪೇಟೆ:ಬೆಳ್ಳಂಬೆಳಗ್ಗೆ ಮುಖ್ಯ ರಸ್ತೆ ಬದಿಯಲ್ಲಿ ಕಾರಿನಿಂದ ಇಳಿದು ತ್ಯಾಜ್ಯಗಳನ್ನು ವಿಲೇವಾರಿ ಮಾಡಿದ ಮಹಿಳೆ
ವಿರಾಜಪೇಟೆ:ವಿದ್ಯಾವಂತರೇ ಹೆಚ್ಚು ಸ್ವಚ್ಛತೆಯ ಬಗ್ಗೆ ಗಮನಹರಿಸುತ್ತಿಲ್ಲ, ಹಾಗೂ ಪಾಲಿಸುತ್ತಿಲ್ಲ ಎಂಬುದಕ್ಕೆ ಸಾಕ್ಷಿ ,ಇಂದು ಬೆಳಗ್ಗೆ ವಿರಾಜಪೇಟೆಯಿಂದ ಪೆರುoಬಾಡಿಗೆ ತೆರಳುವ ಮೀನು ಪೇಟೆಯ ಕಂಚಿ ಕಾಮಾಕ್ಷಿ ಮುಖ್ಯ ರಸ್ತೆಯಲ್ಲಿ ತಮ್ಮ ಕಾರನ್ನು ನಿಲ್ಲಿಸಿ ಕಾರನ್ನು ಹಿಂಬದಿಯಲ್ಲಿದ್ದ, ಉಪಯೋಗಿಸಿದ ಹಳೆ ವಸ್ತುಗಳನ್ನು ರಸ್ತೆ ಬದಿಯಲ್ಲಿ ಹಾಕಿ ಜನಸೇವೆ ಮಾಡಿದ ರೀತಿ ಫೋಸ್ ನೀಡಿ ತೆರಳಿರುವ ದೃಶ್ಯ ಸಾಮಾಜಿಕ ಪ್ರಜ್ಞೆ ಉಳ್ಳವರೊಬ್ಬರು ಸೆರೆ ಹಿಡಿದು ವೈರಲ್ ಮಾಡಿದ್ದಾರೆ.
ತ್ಯಾಜ್ಯವನ್ನು ರಸ್ತೆ ಬದಿ ಹಾಕಿದವರು ಪ್ರಜ್ಞಾವಂತರು ಹಾಗೂ ವಿದ್ಯಾವಂತರ ರೀತಿ ಕಾಣುತ್ತಾರೆ. ಆದರೆ ಅವರು ಪಡೆದುಕೊಂಡ ವಿದ್ಯೆಯಲ್ಲಿ ಪರಿಸರದ ಬಗೆ ಪಾಠ ಆಗಿಲ್ಲ ಅನ್ಸುತ್ತೆ. ಸಂಬಂಧಿಸಿದವರು ಕೂಡಲೇ ಅವರಿಗೆ ಪರಿಸರದ ಪಾಠವನ್ನು ಹೆಚ್ಚಿನ ಮೊತ್ತದ ದಂಡ ಸಹಿತ ಉಪದೇಶ ಮಾಡಿದರೆ ಸ್ವಲ್ಪ ಮಟ್ಟಿಗೆ ಈ ರೀತಿಯ ವಿದ್ಯಾವಂತರ ಅಲ್ಪಬುದ್ಧಿಯನ್ನು ತಿದ್ದಿಕೊಳ್ಳಲು ಸಹಕಾರಿ ಆಗಬಹುದು ಎಂದು ಪರಿಸರ ಪ್ರಿಯರು ಅಭಿಪ್ರಾಯಸಿದ್ದಾರೆ.
What's Your Reaction?
Like
5
Dislike
1
Love
2
Funny
1
Angry
5
Sad
3
Wow
0
