ವೋಲ್ಟೇಜ್ ಸಮಸ್ಯೆ: ನವಗ್ರಾಮದಲ್ಲಿ ಟಿ.ಸಿ ಅಳವಡಿಕೆ
ಕುಶಾಲನಗರ,ಮಾ೨೫: ಕೂಡುಮಂಗಳೂರು ಗ್ರಾ.ಪಂ ವ್ಯಾಪ್ತಿಯ ಕೂಡ್ಲೂರು ಗ್ರಾಮದ ನವಗ್ರಾಮದಲ್ಲಿ ವೋಲ್ಟೇಜ್ ಸಮಸ್ಯೆಯಿದ್ದ ಕಾರಣ ಹೆಚ್ಚು ಸಾಮರ್ಥ್ಯವಿರುವ ಟಿ.ಸಿ ಅಳವಡಿಸಲಾಯಿತು. ನವಗ್ರಾಮದಲ್ಲಿ ವೋಲ್ಟೇಜ್ ಸಮಸ್ಯೆಯಿಂದಾಗ ಆಗಾಗ ವಿದ್ಯುತ್ ಕಡಿತ ಹಾಗೂ ಇನ್ನಿತರ ಸಮಸ್ಯೆಗಳು ಎದುರಾಗಿತ್ತಿದ್ದವು. ಈ ಹಿನ್ನಲೆ ಶಾಸಕರ ಸೂಚನೆ ಮೇರೆಗೆ ನೂತನ ಟಿಸಿ ಅಳವಡಿಸಲಾಯಿತು.
ಈ ಸಂದರ್ಭ ಮಾತನಾಡಿದ ಗ್ರಾಪಂ ಮಾಜಿ ಸದಸ್ಯ ಕೆ.ಬಿ.ಶಂಶುದ್ಧೀನ್, ನವಗ್ರಾಮದಲ್ಲಿ ವೋಲ್ಟೇಜ್ ಸಮಸ್ಯೆ ಇರುವ ಕಾರಣ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತರಲಾಗಿತ್ತು. ಶಾಸಕರು ಸಮಸ್ಯೆ ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು.
ಅದರಂತೆ ನವಗ್ರಾಮದಲ್ಲಿ ಹೆಚ್ಚು ವೋಲ್ಟೇಜ್ ಸಾಮರ್ಥ್ಯವಿರುವ ಟಿಸಿ ಅಳವಡಿಸಿಕೊಟ್ಟಿದ್ದು, ಶಾಸಕರಿಗೆ ಹಾಗೂ ಚೆಸ್ಕಾಂ ಅಧಿಕಾರಿಗಳಿಗೆ ಧನ್ಯವಾದಗಳು ಎಂದ ಅವರು, ಸುಂದರನಗರದ, ಬಸವೇಶ್ವರ ಬಡಾವಣೆ ಹಾಗೂ ವಿನಾಯಕ ಬಡಾವಣೆಯಲ್ಲಿ ಕೂಡಾ ವೋಲ್ಟೇಜ್ ಸಮಸ್ಯೆ ಇದೆ. ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.
ಈ ಸಂದರ್ಭ ಎಇಇ ಮಂಜುನಾಥ್, ಜೆಇ ರಾಣಿ, ಲೈನ್ ಮ್ಯಾನ್ ಗಳಾದ ಮಹದೇವ್, ರವಿ, ರಹಮಾನ್, ವೆಂಕಟೇಶ್ ಇನ್ನಿತರರು ಇದ್ದರು.