ಚೆನ್ನಯ್ಯನಕೋಟೆಯಲ್ಲಿ ಎರಡು ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗೆ ಚಾಲನೆ

Mar 2, 2026 - 14:05
 0  441
ಚೆನ್ನಯ್ಯನಕೋಟೆಯಲ್ಲಿ ಎರಡು ಕೋಟಿಗೂ ಅಧಿಕ ವೆಚ್ಚದ ಕಾಮಗಾರಿಗೆ ಚಾಲನೆ

ಸಿದ್ದಾಪುರ; ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಭೂಮಿ ಪೂಜೆ ಹಾಗೂ ಉದ್ಘಾಟನೆ ನೆರವೇರಿಸಿದರು.

 ಚೆನ್ನಯ್ಯನಕೋಟೆಯ ಪರಿಶಿಷ್ಟ ಜಾತಿ ಸಮುದಾಯದವರ ಗದ್ದೆಯ ಬಳಿ ಹರಿಯುವ ಹಳ್ಳಕ್ಕೆ ಪಿಕಪ್ ಹಾಗೂ ನಾಲೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಈ ಕಾಮಗಾರಿಯೂ ಸುಮಾರು ₹ 2 ಕೋಟಿ ವೆಚ್ಚದಲ್ಲಿ, ಸಣ್ಣ ನೀರಾವರಿ ಇಲಾಖೆ ಮೂಲಕ ನಡೆಯಲಿದೆ ಎಂದು ಶಾಸಕರು ತಿಳಿಸಿದರು. ಈ ಸಂದರ್ಭದಲ್ಲಿ ಗುತ್ತಿಗೆದಾರರಿಗೆ ಕಾಮಗಾರಿಯ ಗುಣಮಟ್ಟ ಕಾಯ್ದುಕೊಂಡು ಶೀಘ್ರದಲ್ಲಿ ಮುಕ್ತಾಯಗೊಳಿಸಬೇಕೆಂದು ಸೂಚಿಸಿದರು.

 ಬಳಿಕ ಬಸವನಹಳ್ಳಿಯಲ್ಲಿ ಮಾನ್ಯ ಶಾಸಕರ ಅನುದಾನವಾದ ₹ 10 ಲಕ್ಷಗಳಲ್ಲಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆಯ ಲೋಕಾರ್ಪಣೆ ನಡೆಸಿ, ಸ್ಥಳೀಯರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶುಭ ಕೋರಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸ್ಥಳೀಯ ಹಿರಿಯರು ಮಾನ್ಯ ಶಾಸಕರ ಅನುದಾನಕ್ಕಾಗಿ ಧನ್ಯವಾದ ಅರ್ಪಿಸಿದರಲ್ಲದೆ ಶಾಸಕರು ನೀಡುತ್ತಿರುವ ಅನುದಾನಗಳು ಹಾಗೂ ಜನಪರ ಕೆಲಸಗಳ ಬಗ್ಗೆ ಮನದಾಳದ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಟ್ಟಡ ರಂಜಿ ಪೂಣಚ್ಚ, ಪಂಚಾಯಿತಿ ಅಧ್ಯಕ್ಷರು ಜಯ ಲಕ್ಹ್ಮೀ, ಸದಸ್ಯರು ವಿಜು ನಾರಾಯಣ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಗಣೇಶ್, ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು ಹನೀಫ್, ತಾಲೂಕು ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರು ರಫೀಕ್, ಪಾಲಿಬೆಟ್ಟ ವಲಯ ಅಧ್ಯಕ್ಷರು ಸಾಬಾ ಕಾಳಪ್ಪ, ಪಾಲಿಬೆಟ್ಟ ಪಂಚಾಯಿತಿ ಸದಸ್ಯರು ನಾಸಿರ್, ಅಜ್ಜಿಕುಟ್ಟಿರ ಪೊನ್ನು, ಚೆಕು, ಅನಿಲ್, ಕುಂಡಚ್ಚಿರ ಮಂಜು ದೇವಯ್ಯ, ರವೀಂದ್ರ ಭಾವೆ, ಸಭು, ಡಾ ವಾಸು, ಪೂಣಚ್ಚ, ಎಂ ಜಿ ಬೆಳ್ಳಿಪ್ಪ, ಎಂ ಬಿ ಅಪ್ಪಣ್ಣ, ಗಗನ್ ಕಾರ್ಯಪ್ಪ, ಹರ್ಷ,ಅಪ್ಪಚ್ಚು, ಗಣೇಶ್, ಅಪ್ಪಯ್ಯ,ಲೋಹಿತ್, ಶಾಂತಿ, ಲಕ್ಷ್ಮೀ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 2
Angry Angry 0
Sad Sad 0
Wow Wow 0