ಕಂದಾಯ ಸಚಿವರನ್ನು ಭೇಟಿ ಮಾಡಿದ ಎ‌ಎಸ್ ಪೊನ್ನಣ್ಣ: ಕರ್ನಾಟಕ ಕಂದಾಯ ಕಾಯ್ದೆ 1964ಕ್ಕೆ ತಿದ್ದುಪಡಿ ತರಲು ಮನವಿ

Jul 14, 2025 - 21:40
 0  102
ಕಂದಾಯ ಸಚಿವರನ್ನು ಭೇಟಿ ಮಾಡಿದ ಎ‌ಎಸ್ ಪೊನ್ನಣ್ಣ:   ಕರ್ನಾಟಕ ಕಂದಾಯ ಕಾಯ್ದೆ 1964ಕ್ಕೆ ತಿದ್ದುಪಡಿ ತರಲು  ಮನವಿ

ಬೆಂಗಳೂರು:ಕರ್ನಾಟಕ ರಾಜ್ಯ ಸರಕಾರದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ರವರನ್ನು, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ರವರು ಇಂದು ವಿಕಾಸ ಸೌಧದ ಸಚಿವರ ಕೊಠಡಿಯಲ್ಲಿ ಭೇಟಿ ಮಾಡಿ, ಕಂದಾಯ ಇಲಾಖೆಯ ಕೆಲವು ಮಸೂದೆಗಳಿಗೆ ತಿದ್ದುಪಡಿ ತರುವಂತೆ ಮನವಿ ಸಲ್ಲಿಸಿದರು.

ವಿಶೇಷವಾಗಿ, ಕೊಡಗಿನವರ ಜಮ್ಮಬಾಣೆಗೆ ಕಂದಾಯ ನಿಗದಿ, ಪಟ್ಟೇದಾರರ ಸಮಸ್ಯೆ ಮತ್ತು ಪಹಣಿ ಪತ್ರದಲ್ಲಿ ನಂಬರ್ ಗಳ ಸಮಸ್ಯೆಯನ್ನ ನಿವಾರಣೆ ಮಾಡಲು ಸೂಕ್ತ ತಿದ್ದುಪಡಿಯನ್ನು ಕರ್ನಾಟಕ ಕಂದಾಯ ಕಾಯ್ದೆ 1964 ಕ್ಕೆ ತರಬೇಕೆಂದು ಕಂದಾಯ ಸಚಿವರಲ್ಲಿ ಮನವಿ ಮಾಡಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಕಂದಾಯ ಸಚಿವರು, ಮುಂಬರುವ ಮುಂಗಾರು ಅಧಿವೇಶನದಲ್ಲಿ ಅಗತ್ಯ ತಿದ್ದುಪಡಿಯನ್ನು ತರಲಾಗುವುದೆಂಬ ಭರವಸೆಯನ್ನು ನೀಡಿದರು.

What's Your Reaction?

Like Like 0
Dislike Dislike 0
Love Love 0
Funny Funny 1
Angry Angry 0
Sad Sad 0
Wow Wow 0