ಸಿದ್ದಾಪುರದಲ್ಲಿ "ಅಸ್ಸಿರಾತುಲ್ ಮುಸ್ತಖೀಂ" ಕಾರ್ಯಕ್ರಮ: ಸಮಸ್ತ ನೂರನೇ ವಾರ್ಷಿಕ ಮಹಾ ಸಮ್ಮೇಳನ ಯಶಸ್ಸುಗೊಳಿಸಲು ಗಣ್ಯರ ಕರೆ

ಸಿದ್ದಾಪುರದಲ್ಲಿ  "ಅಸ್ಸಿರಾತುಲ್ ಮುಸ್ತಖೀಂ" ಕಾರ್ಯಕ್ರಮ:  ಸಮಸ್ತ ನೂರನೇ ವಾರ್ಷಿಕ ಮಹಾ ಸಮ್ಮೇಳನ ಯಶಸ್ಸುಗೊಳಿಸಲು ಗಣ್ಯರ ಕರೆ

ಸಿದ್ದಾಪುರ: ಸಮಸ್ತ ಕೊಡಗು ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ವತಿಯಿಂದ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಎಂ ಅಬ್ದುಲ್ಲ ಪೈಝಿ ಉಸ್ತಾದರು ಸಿದ್ದಾಪುರದಲ್ಲಿ ನಡೆದ "ಅಸ್ಸಿರಾತುಲ್ ಮುಸ್ತಖೀಂ " ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಸ್ತ 100ನೇ ವಾರ್ಷಿಕ ಮಹಾ ಸಮ್ಮೇಳನ ಕಾಸರಗೋಡು ಕುನಿಯಾ ದಲ್ಲಿ ಜೂನ್4,5,6,7,8 ನಡೆಯಲಿದೆ. ಇದರ ಪ್ರಚಾರಾರ್ಥ ಎಲ್ಲಾ ಪೋಷಕ ಸಂಘಟನೆಗಳು ಕಾರ್ಯಪ್ರವೃತರಾಗಬೇಕಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯನ್ನು ಎಸ್.ಕೆ.ಜೆ.ಎಂ.ಸಿ.ಸಿ ಪ್ರಧಾನ ಕಾರ್ಯದರ್ಶಿ ಎಂ ಅಬ್ದುರ್ರಹ್ಮಾನ್ ಮುಸ್ಲಿಯಾರ್ ವಹಿಸಿದರು. ನೈಜ ಪಾರಂಪರ್ಯದ ಶಕ್ತಿ,ನೂರನೇ ವರುಷಕ್ಕೆ ದಾಪುಗಾಲಿಟ್ಟ ಸಮಸ್ತ ಮಾತ್ರವಾಗಿದೆ ಎಂದು ಮುಖ್ಯ ಭಾಷಣಕಾರರಾಗಿ ಆಗಮಿಸಿದ ಮುಸ್ತಫ ಅಶ್ರಫಿ ಕಕ್ಕುಪ್ಪಡಿ ಹೇಳಿದರು.

ಕೊಡಗಿನ ಸಮಸ್ತದ ಪೋಷಕ ಸಂಘಟನೆಗಳಿಂದ ಜಂಇಯ್ಯತುಲ್ ಮುಅಲ್ಲಿಮೀನ್ ಕೇಂದ್ರ ಕಾರ್ಯದರ್ಶಿ ಯಾಗಿ ಆಯ್ಕೆಯಾದ ಎಂ ಅಬ್ದುರ್ರಹ್ಮಾನ್ ಮುಸ್ಲಿಯಾರ್ ರವರನ್ನು ಎಸ್ ಕೆ.ಜೆ.ಎಂ, ಎಸ್.ಕೆ.ಎಸ್.ಎಸ್.ಎಫ್,ಎಸ್.ವೈ.ಎಸ್, ಎಸ್.ಎಂ.ಎಫ್ಎಸ್.ಕೆ.ಎಸ್.ಎಸ್.ಎಫ್ ಶಾಖೆ, ಕೆಎ ಯಾಕುಬ್ ಬಜೆಗುಂಡಿ,ಮುಂತಾದ ಸಂಘಟನೆಯ ನೇತರರು ಅಬ್ದುರ್ರಹ್ಮಾನ್ ಮುಸ್ಲಿಯಾರ್ ರವರನ್ನು ಅಭಿನಂದಿಸಿ ಸ್ಮರಣಿಕೆಯನ್ನು ನೀಡಿದರು. ಆರಿಫ್ ಫೈಝಿ ಸ್ವಾಗತಿಸಿ, ಹನೀಫ್ ಫೈಝಿ ಎಡಪಾಲ ವಂದಿಸಿದರು. ವೇದಿಕೆಯಲ್ಲಿ ಎಸಿ ಉಸ್ಮಾನ್ ಫೈಝಿ, ಸೂಫಿ ದಾರಿಮಿ, ಸಿಪಿಎಂ ಬಶೀರ್ ಹಾಜಿ, ಮುಹಮ್ಮದಲಿ ಫೈಝಿ, ಉಮ್ಮರ್ ಫೈಝಿಸಿದ್ದೀಖ್ ವಾಫಿ ,ಕೆ ಎ ಯಾಕುಬ್ ಬಜೆಗುಂಡಿ, ಸಿದ್ದಾಪುರ ರೇಂಜ್ ಕಾರ್ಯದರ್ಶಿ ಬಶೀರ್ ಹಸನಿ, ಮಡಿಕೇರಿ ರೇಂಜ್ ಕಾರ್ಯದರ್ಶಿ ಉಬೈದ್ ಫೈಝಿ, ಮತ್ತು ರಝಾಕ್ ಫೈಝಿ ಭಾಗವಹಿಸಿದ್ದರು. ಎಂ ತಮ್ಲೀಖ್ ದಾರಿಮಿ ನಿರೂಪಿಸಿದರು.