ಅಗಲಿದ ಕೆ.ಬಿ.ಜಿ. ಅವರಿಗೆ ಕೊಡಗು ಪತ್ರಕತ೯ರ ಸಂಘದಿಂದ ನುಡಿನಮನ

ಅಗಲಿದ ಕೆ.ಬಿ.ಜಿ. ಅವರಿಗೆ ಕೊಡಗು ಪತ್ರಕತ೯ರ ಸಂಘದಿಂದ ನುಡಿನಮನ

ಮಡಿಕೇರಿ: ಮೈಸೂರು ಮಿತ್ರ ಮತ್ತು ಸ್ಟಾರ್ ಆಫ್ ಮೈಸೂರು ಪತ್ರಿಕೆಗಳ ಸ್ಥಾಪಕ ಸಂಪಾದಕ ಕಲ್ಯಾಟಂಡ ಗಣಪತಿ ಅವರ ನಿಧನಕ್ಕೆ ಕೊಡಗು ಪತ್ರಕತ೯ರ ಸಂಘದಿಂದ ಶೖದ್ದಾಂಜಲಿ ಸಲ್ಲಿಸಲಾಯಿತು. 48 ವಷ೯ಗಳ ಕಾಲ ಅಂಕಣಕಾರರಾಗಿ, ಪತ್ರಕತ೯ರಾಗಿ ಜನಮನದಲ್ಲಿ ನೆಲೆಯೂರಿದ ಪತ್ರಕತ೯ನ ಅಗಲಿಕೆಗೆ ಸಂಘದ ಮೂಲಕ ಪತ್ರಕತ೯ರು, ಸಂಘಸಂಸ್ಥೆಗಳ ಪ್ರಮುಖರು ನುಡಿನಮನ ಸಲ್ಲಿಸಿದರು.

ನಗರದ ಪತ್ರಿಕಾಭವನದಲ್ಲಿ ಕೊಡಗು ಪತ್ರಕತ೯ರ ಸಂಘದಿಂದ ಆಯೋಜಿತ ದಿ.ಗಣಪತಿ ಅವರಿಗೆ ಸಂತಾಪ ಸಭೆಯಲ್ಲಿ ಮಾತನಾಡಿದ ಹಿರಿಯ ಪತ್ರಕತ೯ ಜಿ.ರಾಜೇಂದ್ರ, ಮೇರು ವ್ಯಕ್ತಿತ್ವದ ಗಣಪತಿಯವರ ಅಗಲಿಕೆ ಪತ್ರಿಕೋದ್ಯಮ ಮಾತ್ರವಲ್ಲದೇ ಸಮಾಜಕ್ಕೂ ಸಾಕಷ್ಟು ನಷ್ಟ ಉಂಟು ಮಾಡಿದೆ. ಯಾರನ್ನೂ ದ್ವೇಷಿಸದ, ಯೂರನ್ನೂ ದೂಷಿಸದ ಗಣಪತಿ ಅವರಲ್ಲಿದ್ದ ಸದ್ಗುಣ ಇತರರಿಗೂ ಆದಶ೯ಪ್ರಾಯವಾದದ್ದು ಎಂದರಲ್ಲದೇ, ಪರಿಸರ ಕಾಳಜಿಯ ಜತೆಗೇ ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದ ಸುಸಂಸ್ಕೖತ ವ್ಯಕ್ತಿತ್ವದ ಮೇಧಾವಿಯಾಗಿದ್ದರು ಗಣಪತಿಯವರು ಎಂದು ಸ್ಮರಿಸಿಕೊಂಡರು. ಮಾಧ್ಯಮ ಮುಖ್ಯಸ್ಥರೋವ೯ನಿಗೆ ಅಗತ್ಯವಾಗಿದ್ದ ಎಲ್ಲಾ ಅಗತ್ಯ ಗುಣಗಳನ್ನೂ ಹೊಂದಿದ್ದ ಗಣಪತಿಯವರು ನಿಷ್ಪಾಕ್ಷಪಾತ ಧೋರಣೆ ಹೊಂದುವ ಮೂಲಕ ಜನಾನುರಾಗಿ ಪತ್ರಿಕೋದ್ಯಮಿಯಾಗಿ ಗುರುತಿಸ್ಪಟ್ಟಿದ್ದರು ಎಂದೂ ರಾಜೇಂದ್ರ ಸ್ಮರಿಸಿದರು.

ಹಿರಿಯ ಪತ್ರಕತ೯ ಬೈ.ಶ್ರೀ . ಪ್ರಕಾಶ್ ಮಾತನಾಡಿ, 4 ವಷ೯ಗಳ ಕಾಲ ಮೈಸೂರು ಮಿತ್ರದ ಕೊಡಗು ವರದಿಗಾರನಾಗಿ ಕಾಯ೯ನಿವ೯ಹಿಸಿದ ದಿನಗಳು ಅವಿಸ್ಮರಣೀಯವಾಗಿದ್ದು, ಅನೇಕ ಸಂಸ್ಥೆಗಳಿಗೆ ಆಥಿ೯ಕ ನೆರವನ್ನೂ ನೀಡಿದರೂ ಪ್ರಚಾರವನ್ನು ಎಂದಿಗೂ ಬಯಸದ ವಿಶೇಷ ಸ್ವಭಾವ ಗಣಪತಿಯವರದ್ದಾಗಿತ್ತು ಎಂದು ಹೆಮ್ಮೆಯಿಂದ ನುಡಿದರು.

ಹಿರಿಯ ಪತ್ರಕತ೯ ಬಿ.ಜಿ. ಅನಂತಶಯನ ಮಾತನಾಡಿ, ಸಣ್ಣ ಪತ್ರಿಕೆಗಳ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗಣಪತಿಯವರು ಅಪಾರ ತಾಳ್ಮೆ ಮತ್ತು ಉತ್ಸಾಹ ತೋರುತ್ತಿದ್ದರು. ಸಾಕಷ್ಟು ದೇಶಗಳಿಗೆ ಪ್ರವಾಸ ಮಾಡಿದ್ದ ಗಣಪತಿಯವರ ಅನುಭವದ ಆಧಾರದಲ್ಲಿ ಪ್ರಕಟಿತ ಕೖತಿಗಳು ದಾಖಲಾಹ೯ವಾಗಿವೆ ಎಂದರು. ಇತರ ಲೇಖಕರ ಕೖತಿಗೂ ಮೆಚ್ಚುಗೆ ಸೂಚಿಸಿ ಪ್ರೋತ್ಸಾಹಿಸುತ್ತಿದ್ದ ಗಣಪತಿಯವರು ದಲೈಲಾಮ ಅವರಂತೆಯೇ ಸುಂದರ ನಗು ಹೊಂದಿದ್ದ ಚಂದದ ವ್ಯಕ್ತಿತ್ವದವರು ಎಂದೂ ವಣಿ೯ಸಿದರು.

ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಗೌರವ ಕಾಯ೯ದಶಿ೯ ಬಾಲಾಜಿ ಕಶ್ಯಪ್ ಮಾತನಾಡಿ, ಮೈಸೂರಿನಲ್ಲಿ ಭಾರತೀಯ ವಿದ್ಯಾಭವನಕ್ಕೆ ಎರಡು ವಷ೯ಗಳಿಂದ ಅಧ್ಯಕ್ಷರಾಗಿದ್ದ ಗಣಪತಿಯವರು ಸಾಕಷ್ಟು ಹೊಸತನದಿಂದ ವಿದ್ಯಾಭವನಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಕಿರಿಯರಿಂದಲೂ ಸಲಹೆಗಳನ್ನು ಕೇಳಿ ಸರಿಕಂಡರೆ ಅದನ್ನು ಪಾಲಿಸುವ ಅಪರೂಪದ ವ್ಯಕ್ತಿತ್ವ ಗಣಪತಿಯವರದ್ದಾಗಿತ್ತು ಎಂದು ಶ್ಲಾಘಿಸಿದರು. ಹಾಸ್ಯ ಮನೋಭಾವ, ನಗು ಜತೆಗೆ ದ್ವೇಷರಹಿತವಾದ ಬೈಗುಳವನ್ನು ಗಣಪತಿಯವರಿಂದ ಕೇಳುವುದೇ ಆಪ್ತ ಅನುಭವ ಎಂದೂ ಬಾಲಾಜಿ ಸ್ಮರಿಸಿದರು.

ಹಿರಿಯ ಪತ್ರಕ೯ ಜಿ.ಚಿದ್ವಿಲಾಸ್ ಮಾತನಾಡಿ, ಕೊಡಗಿನಲ್ಲಿ ಬಿ.ಎಸ್ ಗೋಪಾಲಕೖಷ್ಣ ಪತ್ರಿಕೋಧ್ಯಮದ ಬೀಷ್ಮ ಎಂಬ ಹೆಗ್ಗಳಿಕೆ ಪಡೆದಂತೆ ಮೈಸೂರಿನಲ್ಲಿ ಕಲ್ಯಾಟಂಡ ಗಣಪತಿ ಮೈಸೂರು ಪತ್ರಿಕೋಧ್ಯಮದ ಬೀಷ್ಮ ಎಂಬ ಖ್ಯಾತಿಗೆ ಪಾತ್ರರಾಗಿದ್ದರು. ಕೊಡಗಿನಿಂದ ತೆರಳಿ ಮೈಸೂರಿನಲ್ಲಿ ಎರಡೂ ಪತ್ರಿಕೆಗಳನ್ನು ಪ್ರಭಾವಶಾಳಿಯಾಗಿ ರೂಪಿಸಿದ್ದು ಸಾಧಾರಣ ಸಾಹಸವೇನಲ್ಲ ಎಂದು ವಣಿ೯ಸಿದರು. ಮತ್ತೊಂದು ಪತ್ರಿಕೆಯಲ್ಲಿ ಮತ್ತೋವ೯ರ ಬರಹವನ್ನು ಗಮನಿಸಿ, ಅದನ್ನು ಶ್ಲಾಘಿಸಿ ಪ್ರೋತ್ಸಾಹಿಸುವ ದೊಡ್ಡ ಗುಣ ಗಣಪತಿಯವರಲ್ಲಿತ್ತು ಎಂದು ಹೇಳಿದ ಚಿದ್ವಿಲಾಸ್, ಹಿರಿಯ - ಕಿರಿಯ ಎಂಬ ಬೇಧಭಾವವಿಲ್ಲದೇ ಎಲ್ಲರನ್ನೂ ಒಂದೇ ಮನೋಭಾವದಿಂದ ಕಾಣುತ್ತಿದ್ದರು. ರೋಟರಿ, ಭಾರತೀಯ ವಿದ್ಯಾಭವನದಲ್ಲಿಯೂ ಸಕ್ರಿಯರಾಗಿದ್ದ ಗಣಪತಿ ಪತ್ರಿಕೋದ್ಯಮದಂತೆ ತಾವು ತೊಡಗಿಸಿಕೊಂಡ ಸಾಮಾಜಿಕ ಸೇವಾ ಕಾಯ೯ಗಳಲ್ಲಿಯೂ ಯಶಸ್ಸು ಕಂಡಿದ್ದರು. ಛಲ ಮತ್ತು ನಿಷ್ಟೆಯೇ ಈ ಸಫಲತೆಗೆ ಕಾರಣವಾಗಿತ್ತು ಎಂದೂ ಹೆಮ್ಮೆ ವ್ಯಕ್ತಪಡಿಸಿದರು.

ಕೊಡಗು ಪತ್ರಕತ೯ರ ಸಂಘದ ಅಧ್ಯಕ್ಷ ಅನಿಲ್ ಹೆಚ್.ಟಿ. ಮಾತನಾಡಿ, ರಾಜ್ಯದಲ್ಲಿಯೇ ಇಂಗ್ಲೀಷ್ ಭಾಷೆಯಲ್ಲಿ ನಾಲ್ಕೂವರೆ ದಶಕಗಳ ಕಾಲ ಗಣಪತಿಯವರ ಹಾಗೇ ಅಂಕಣ ಬರಹಗಳನ್ನು ಬರೆದ ಮತ್ತೋವ೯ ಪತ್ರಕತ೯ನಿಲ್ಲ. ಅರಮನೆ ನಗರವಾದ ಮೈಸೂರಿನಲ್ಲಿ ಪತ್ರಿಕೋದ್ಯಮಿಯಾಗಿದ್ದರೂ ಕೊಡಗು, ಕೊಡವ ಸಂಸ್ಕೖತಿ ಬಗ್ಗೆ ಸಾಕಷ್ಟು ಪ್ರಚಾರ ನೀಡುವ ಮೂಲಕ ಮೈಸೂರು - ಕೊಡಗಿನ ಬೆಸುಗೆಯಂತೆ ಗಣಪತಿ ಕಂಗೊಳಿಸಿದ್ದರು ಎಂದು ಹೇಳಿದರು. ಠಾಕುಠೀಕಾಗಿ ಹೊರಡುತ್ತಿದ್ದ ಗಣಪತಿಯವರ ಜೀವನಶೈಲಿಯೇ ಸೊಬಗಿನಿಂದ ಕೂಡಿದ್ದಾಗಿತ್ತು. ಮೈಸೂರಿನಲ್ಲಿ ಪತ್ರಿಕೋದ್ಯಮದ ಗರಡಿ ಮನೆಯಂತೆ ತಮ್ಮ ಪತ್ರಿಕಾಲಯವನ್ನು ರೂಪಿಸಿದ್ದ ಗಣಪತಿಯವರ ಮಾಗ೯ದಶ೯ನದಲ್ಲಿ ತಯಾರಾದ ಪತ್ರಕತ೯ರು ರಾಷ್ಟ್ರವ್ಯಾಪಿ ಖ್ಯಾತಿಗಳಿಸಿದ್ದು ಗಣಪತಿಯವರ ತರಬೇತಿ ಶೈಲಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಹೆಮ್ಮೆಯಿಂದ ನುಡಿದರು. ಗಾಂಧಿ ಎಂದೇ ಆಪ್ತರ ಬಳಗದಲ್ಲಿ ಖ್ಯಾತರಾಗಿದ್ದ ಕಲ್ಯಾಟಂಡ ಗಣಪತಿ ಅವರ ಅಂಕಣ ಬರಹಗಳು ಸದಾ ಓದುಗ ಅಭಿಮಾನಿಗಳ ಮನದಲ್ಲಿ ಶಾಶ್ವತವಾಗಿರುತ್ತದೆ ಎಂದೂ ಅನಿಲ್ ಹೇಳಿದರು.

ಕೊಡಗು ಪತ್ರಿಕಾಭವನ ಟ್ರಸ್ಟ್ ನ ಪ್ರಧಾನ ಕಾಯ೯ದಶಿ೯ ಎಸ್.ಜಿ.ಉಮೇಶ್ ಮಾತನಾಡಿ, ಮುಕ್ತರೀತಿಯ ಸರಳ ಶೈಲಿಯ ಗಣಪತಿಯವರ ಬರವಣಿಗೆ ಯುವಪತ್ರಕತ೯ರಿಗೆ ಮಾಗ೯ದಶ೯ಕವಾಗಿದೆ ಎಂದರು.

ಕೊಡಗು ಪತ್ರಕತ೯ರ ಸಂಘದ ಉಪಾಧ್ಯಕ್ಷ ಪ್ರಸಾದ್ ಸಂಪಿಗೆಕಟ್ಟೆ ಮಾತನಾಡಿ, ಗುರು ಸಮಾನರಾಗಿದ್ದ ಗಣಪತಿಯವರಿಂದ ಕಲಿತ ವಿದ್ಯೆ ವೖತ್ತಿಜೀವನದುದ್ದಕ್ಕೂ ಮಾದರಿಯಾಗಿರುತ್ತದೆ ಎಂದರು.

ಕೊಡಗು ಪತ್ರಕತ೯ರ ಸಂಘದ ಪ್ರಧಾನ ಕಾಯ೯ದಶಿ೯ ಸುರೇಶ್ ಬಿಳಿಗೇರಿ, ಕೊಡಗು ಪತ್ರಿಕಾವಿತರಕರ ಸಂಘದ ಅಧ್ಯಕ್ಷ ಟಿ.ಜೆ.ಸತೀಶ್, ರಾಜ್ಯ ಔಷಧಿ ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷ ಅಂಬೆಕಲ್ ಜೀವನ್, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ್ ರೈ, ರೋಟರಿ ವುಡ್ಸ್ ನಿದೇ೯ಶಕ ವಸಂತ್ ಕುಮಾರ್, ಯೋಗಗುರು ಕೆ.ಕೆ.ಮಹೇಶ್ ಕುಮಾರ್, ಲಯನ್ಸ್ ಕ್ಲಬ್ ನಿದೇ೯ಶಕ ಅಂಬೆಕಲ್ ನವೀನ್ ಕುಶಾಲಪ್ಪ, ಕೊಡಗು ಪತ್ರಕತ೯ರ ಸಂಘದ ಸ್ಥಾಪಕ ಕಾಯ೯ದಶಿ೯ ಉಜ್ವಲ್ ರಂಜಿತ್, ಕುಶಾಲನಗರ ತಾಲೂಕು ಸಂಘದ ಅಧ್ಯಕ್ಷ ವಿಘ್ನೇಷ್ ಭೂತನಕಾಡು, ಸಂಘದ ಜಿಲ್ಲಾ ನಿದೇ೯ಶಕರಾದ ಗುರುದಶ೯ನ್, ರಂಜಿತ್ ಕವಲಪಾರ, ಶಿವಣ್ಣ, ಹೆಚ್.ಟಿ. ಅರುಣ್ ಕೂಗ್೯, ಪ್ರವೀಣ್ ಕುಮಾರ್, ಎಚ್.ಎನ್.ಲಕ್ಷ್ಮೀಶ್, ಸದಸ್ಯ ದಕ್ಷಿಣ ಮೂತಿ೯, ಶಿವಪ್ರಸಾದ್ ಹಾಜರಿದ್ದರು,

ಕೆ.ಬಿ. ಗಣಪತಿಯವರ ಭಾವಚಿತ್ರಕ್ಕೆ ಪುಪ್ಪಾಚ೯ನೆ ಮಾಡಿ ಮೌನಾಪ೯ಣೆ ಮೂಲಕ ಶೖದ್ದಾಂಜಲಿ ಸಲ್ಲಿಸಲಾಯಿತು.