ವಿ.ಬಾಡಗ: 11 ಎಕರೆ ಜಾಗ ಕಂದಾಯ ಇಲಾಖೆ ವಶಕ್ಕೆ!

ವಿ.ಬಾಡಗ: 11 ಎಕರೆ ಜಾಗ ಕಂದಾಯ ಇಲಾಖೆ ವಶಕ್ಕೆ!

ವಿರಾಜಪೇಟೆ:ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನವರು ವಿರಾಜಪೇಟೆಯ ತಾಲೂಕಿನ ವಿ ಬಾಡಗದಲ್ಲಿ ಮಹತ್ವಕಾಂಕ್ಷೆಯ ವಿವಿಧ ಕ್ರೀಡಾ ತರಬೇತಿ ಕೇಂದ್ರಕ್ಕೆ ಈ ಹಿಂದೆ ಹನ್ನೊಂದು ಎಕರೆ ಸರ್ಕಾರಿ ಜಾಗವನ್ನು ಕಾಯ್ದಿರಿಸುವಂತೆ ತಹಶೀಲ್ದಾರರಿಗೆ ಸೂಚಿಸಿದ್ದರು.ಅದರಂತೆ ದಿನಾಂಕ 1-07-2025 ರಂದು ತಹಶೀಲ್ದಾರ್ ರವರ ನೇತೃತ್ವದಲ್ಲಿ  ಸದ್ರಿ ಜಾಗಕ್ಕೆ ತೆರಳಿದ ಕಂದಾಯ ಇಲಾಖೆಯ ಅಧಿಕಾರಿಗಳು ಈ 11 ಎಕರೆ ಜಾಗವನ್ನು ಸ್ವಾಧೀನ ಪಡಿಸಿಕೊಂಡರು.