ಆಲ್ ಸ್ಟಾರ್ ಕೊಡಗು ವರ್ಲ್ ಕಪ್: ಕಲ್ಲುಬಾಯ್ಸ್ ಕಲ್ಲುಬಾಣೆ ಸೆಮಿಫೈನಲ್ ಗೆ ಲಗ್ಗೆ: ಸೆಮಿಫೈನಲ್ ನಲ್ಲಿ ಕಲ್ಲುಬಾಯ್ಸ್ ತಂಡಕ್ಕೆ ಭರ್ಜರಿ ಗೆಲುವು

ಮಡಿಕೇರಿ:ಕೊಡಗು ಜಿಲ್ಲೆಯ ಫುಟ್ಬಾಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗೋಣಿಕೊಪ್ಪಲಿನ ಆಲ್ ಸ್ಟಾರ್ ಯೂತ್ ಕ್ಲಬ್ ಗೋಣಿಕೊಪ್ಪಲಿನ ಜಿಎಂಪಿ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿರುವ ಕೊಡಗು ವರ್ಲ್ಡ್ ಕಪ್ ಆಲ್ ಇಂಡಿಯಾ ಸೂಪರ್ ಫೈವ್ಸ್ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕಲ್ಲುಬಾಯ್ಸ್ ತಂಡವು 04-0 ಗೋಲುಗಳ ಅಂತರದಿಂದ ಸಿದ್ದಾಪುರ ಫ್ರೆಂಡ್ಸ್ ತಂಡವನ್ನು ಮಣಿಸಿ ಫೈನಲ್ ಗೆ ಲಗ್ಗೆಯಿಟ್ಟಿದೆ.ಕೊಡಗು ವರ್ಲ್ಡ್ ಕಪ್ ಫೈನಲ್ ಗೆ ಮೊದಲ ತಂಡವಾಗಿ ಕಲ್ಲುಬಾಯ್ಸ್ ತಂಡವು ಪ್ರವೇಶಿಸಿದೆ.ಕಲ್ಲುಬಾಯ್ಸ್ ತಂಡದ ಕಿಚ್ಚು ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದರು.
What's Your Reaction?






