ಕಾರ್ಮಿಕ ಮಹಿಳೆ ಮೇಲೆ ಕಾಡಾನೆ ದಾಳಿಗೆ ಯತ್ನ ! ಬಿದ್ದು ಪ್ರಾಣಪಾಯದಿಂದ ಪಾರು:ಆಸ್ಪತ್ರೆಗೆ ದಾಖಲು

ಕಾರ್ಮಿಕ ಮಹಿಳೆ ಮೇಲೆ ಕಾಡಾನೆ ದಾಳಿಗೆ ಯತ್ನ !  ಬಿದ್ದು ಪ್ರಾಣಪಾಯದಿಂದ ಪಾರು:ಆಸ್ಪತ್ರೆಗೆ ದಾಖಲು

ಸಿದ್ದಾಪುರ :- ಕಾಡಾನೆ ಕಾಡಿಗಟ್ಟುವ ಕಾರ್ಯಾಚರಣೆ ಸಂದರ್ಭ ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಯೊಂದು ತೋಟ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಮಹಿಳೆಯ ಮೇಲೆ ದಾಳಿಗೆ ಯತ್ನಿಸಿದ ಘಟನೆ ಕುಶಾಲನಗರ ತಾಲ್ಲೂಕಿನನಲ್ವತ್ತೇಕರೆ ಬಳಿ ನಡೆದಿದೆ.

ಕಾಡಾನೆ ದಾಳಿಗೆ ಯತ್ನಿಸಿದ ಸಂದರ್ಭ ಬಿದ್ದು ಗಾಯಗೊಂಡ ಕಾರ್ಮಿಕ ಮಹಿಳೆ ಕವಿತಾ (40) ಪ್ರಾಣಪಾಯದಿಂದ ಪಾರಾಗಿ ಸಿದ್ದಾಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.ನೆಲ್ಯಹುದಿಕೇರಿ, ಅತ್ತಿಮಂಗಲ,ನಲ್ವತ್ತೆಕ್ರೆ ಭಾಗದಲ್ಲಿ ಬಿಡು ಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಚರಣೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕೈಗೊಂಡಿದ್ದರು  ಬೆಳಗಿನಿಂದ ಹುಡುಕಾಟ ನಡೆಸಿದರು ಕಾಡನೆಗಳು ಮಾತ್ರ ಪತ್ತೆಯಾಗಿರಲಿಲ್ಲ ನಂತರ ಮಧ್ಯಾಹ್ನ ವೇಳೆಯಲ್ಲಿ ಕಾಫಿ ತೋಟ ಒಂದರಲ್ಲಿ ಒಂಟಿ ಸಲಗ ಒಂದು ಕಾಣಿಸಿಕೊಂಡಿತ್ತು . ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಫಿ ತೋಟಮಾರ್ಗ ಮಧ್ಯದಿಂದ ಅರಣ್ಯ ಓಡಿಸಲು ಮುಂದಾಗಿದ್ದರು.ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಓಡಿದ ಕಾಡಾನೆ ನಂತರ ಮನೆಯೊಂದರ ಸಮೀಪದ ಹಲಸಿನ ಮರ ಬಳಿ ನಿಂತಿತ್ತು.ಸಮೀಪದ ತೋಟದಲ್ಲಿ ಕೆಲಸ ನಿರ್ವಹಿಸಿ ಮನೆಗೆ ವಾಪಸ್ ಬರುತ್ತಿದ್ದ ಮಹಿಳೆಯನ್ನ ಕಂಡ ಕಾಡಾನೆ ದಾಳಿಗೆ ಯತ್ನಿಸಿತ್ತು ಕಾಡಾನೆದಾಳಿಯಿಂದ ತಪ್ಪಿಸಿಕೊಳ್ಳಲು ಓಡಿದ ಮಹಿಳೆ ಬಿದ್ದು ಗಂಭೀರ ಗಾಯಗೊಂಡರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಸ್ಥಳೀಯರು ಮಹಿಳೆಯನ್ನ ಸಿದ್ದಾಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ದಾಖಲಿಸಿದ್ದರು.

ಸ್ಥಳಕ್ಕೆ ಅರಣ್ಯ ಇಲಾಖೆಯ ಆರ್ ಎಫ್ ಓ ರತನ್ ಕುಮಾರ್ , ಆರ್ ಎಫ್ ಓ ಸಚಿನ್ ಸೇರಿದಂತೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.