ಕುಶಾಲನಗರ: ಕುಂಡೆ-ಬೇಡ ಹಬ್ಬ, ಬಲವಂತವಾಗಿ ಹಣ ವಸೂಲಿ

ಕುಶಾಲನಗರ:ಕೊಡಗು ಜಿಲ್ಲೆಯಲ್ಲಿ ಮೇ21 ಮತ್ತು 22 ರಂದು ಕುಂಡೆ-ಬೇಡು ಹಬ್ಬ ಆಚರಿಸಲಾಗುತ್ತಿದೆ.ಬಲವಂತವಾಗಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುವುದು ಕುಂಡೆ ಹಬ್ಬದಲ್ಲಿ ಮಾಮೂಲಿಯಾಗಿ ಬಿಟ್ಟಿದೆ.ಈ ಹಿನ್ನೆಲೆ ಜಿಲ್ಲಾ ಪೊಲೀಸರ ಇಲಾಖೆ ಕಟ್ಟುನಿಟ್ಟಾದ ಆದೇಶ ನೀಡಿದರು ಕೂಡ ಕುಂಡೆ ಹಬ್ಬದಲ್ಲಿ ಬಲವಂತವಾಗಿ ಸಾರ್ವಜನಿಕರಿಗೆ ಕಿರುಕುಳ ನೀಡಲಾಗುತ್ತಿದೆ. ಕುಂಡೆ-ಬೇಡು ಹಬ್ಬ ಹಿನ್ನೆಲೆ ಕುಶಾಲನಗರದಲ್ಲಿ ಬಲವಂತವಾಗಿ ಹಣ ವಸೂಲಿ ಮಾಡುತ್ತಿದ್ದಾರೆ.ರಸ್ತೆಯಲ್ಲಿ ವಾಹನಗಳನ್ನು ತಡೆದು ಹಣ ವಸೂಲಿ ಮಾಡುತ್ತಿರುವುದರಿಂದ ಕುಶಾಲನಗರ ಬೈಚನಹಳ್ಳಿಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಕಿಲೋಮೀಟರ್ ಗಟ್ಟಲೇ ಸರತಿಸಾಲಿನಲ್ಲಿ ವಾಹನಗಳು ನಿಂತಿದೆ.ಪೊಲೀಸ್ ಇಲಾಖೆ ಕಟ್ಟುನಿಟ್ಟಾದ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.