ಕೊಡಗು ಜಿಲ್ಲಾ ಕೊಯವ ಸಮಾಜದಿಂದ ಎ.ಎಸ್ ಪೊನ್ನಣ್ಣ ಭೇಟಿ: ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸಲು ಮನವಿ

ಕೊಡಗು ಜಿಲ್ಲಾ ಕೊಯವ ಸಮಾಜದಿಂದ ಎ.ಎಸ್ ಪೊನ್ನಣ್ಣ ಭೇಟಿ:  ಸಮಾಜದ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸಲು ಮನವಿ

ಮಡಿಕೇರಿ:ಕೊಡಗು ಜಿಲ್ಲೆಯ ಕೊಯವ ಸಮಾಜದ ಪ್ರಮುಖರು ಇಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣನವರನ್ನು ಭೇಟಿ ಮಾಡಿ ತಮ್ಮ ಕೊಯವ ಸಮಾಜದ ಹಲವು ಅಭಿವೃದ್ಧಿ ಕಾರ್ಯಗಳಿಗೆ ಮನವಿ ಸಲ್ಲಿಸಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಧರ್ಮಜ ಉತ್ತಪ್ಪ ರವರ ನೇತೃತ್ವದಲ್ಲಿ ಹಾಗೂ ಹಿಂದುಳಿದ ವರ್ಗಗಳ ಕೊಡಗು ಜಿಲ್ಲಾಧ್ಯಕ್ಷರಾದ ಬಾನಂಡ ಪೃತ್ಯು ರವರೊಂದಿಗೆ, ಕೋಯವ ಸಮಾಜದ ಅಧ್ಯಕ್ಷರಾದ ಜೆ.ಸಿ ಮಾದಪ್ಪ, ಕಾರ್ಯದರ್ಶಿಯವರಾದ ಟಿ.ಜಿ ಕಾರ್ಯಪ್ಪ, ನಿರ್ದೇಶಕರುಗಳಾದ ಎಂ.ಜಿ ಮಹೇಶ್, ಎಂ. ಪೂಣಚ್ಚ ಕೆ.ಎನ್ ಸುಬ್ಬಯ್ಯ ಮೊದಲಾದವರು ಉಪಸ್ಥಿತರಿದ್ದರು.    ಮನವಿಯನ್ನು ಸ್ವೀಕರಿಸಿದ ಶಾಸಕರು, ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸಿ ಅಗತ್ಯಕ್ಕನುಸಾರ ಸ್ಪಂದಿಸಲಾಗುವುದು ಎಂದು ಭರವಸೆ ನೀಡಿದರು.