ಕೊಡಗು ಜಿಲ್ಲಾ ಮುಸ್ಲಿಂ ಕಪ್ ಫುಟ್ಬಾಲ್ ಪಂದ್ಯಾವಳಿ: ಯುನೈಟೆಡ್ ಎಫ್.ಸಿ ಕುಂಜಿಲ ಹಾಗೂ ಕಿಪ್ಸ್ಟಾ ಮೂರ್ನಾಡು ಕ್ವಾಟರ್ ಫೈನಲ್ ಲಗ್ಗೆ
ಮಡಿಕೇರಿ:ಕೊಡಗು ಜಿಲ್ಲಾ ಮುಸ್ಲಿಂ ಫುಟ್ಬಾಲ್ ಅಸೋಸಿಯೇಷನ್ ಹಾಗೂ ಅಮ್ಮತ್ತಿ ಫ್ರೆಂಡ್ಸ್ ವತಿಯಿಂದ ಅಮ್ಮತ್ತಿಯ ಜಿಎಂಪಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಕೊಡಗು ಜಿಲ್ಲಾ ಮಟ್ಟದ ಮುಸ್ಲಿಂ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಯುನೈಟೆಡ್ ಎಫ್.ಸಿ ಕುಂಜಿಲ ಹಾಗೂ ಮೂರ್ನಾಡುವಿನ ಕಿಪ್ಸ್ಟಾ ತಂಡವು ಕ್ವಾಟರ್ ಫೈನಲ್ ಗೆ ಅರ್ಹತೆ ಪಡೆದುಕೊಂಡಿದೆ.ಗುರುವಾರ ನಡೆದ ಮೊದಲ ಕ್ವಾಟರ್ ಫೈನಲ್ ಪಂದ್ಯವು ಯುನೈಟೆಡ್ ಎಫ್.ಸಿ ಕುಂಜಿಲ ಹಾಗೂ ಮ್ಯಾಡ್ರಿಡ್ ಎಫ್.ಸಿ ಕೊಂಡಂಗೇರಿ ತಂಡಗಳ ನಡುವೆ ನಡೆಯಿತು.ನಿಗದಿತ ಸಮಯದಲ್ಲಿ ಎರಡು ತಂಡಗಳು ಗೋಲುಗಳಿಸಲು ಸಾಧ್ಯವಾಗಲಿಲ್ಲ.ಅಂತಿಮವಾಗಿ ಯುನೈಟೆಡ್ ಎಫ್.ಸಿ ತಂಡವು 4-3 ಗೋಲುಗಳ ಅಂತರದಿಂದ ಪೆನಾಲ್ಟಿ ಶೂಟೌಟ್ ನಲ್ಲಿ ಮ್ಯಾಡ್ರಿಡ್ ಎಫ್.ಸಿ ತಂಡವನ್ನು ಮಣಿಸಿ ಕ್ವಾಟರ್ ಫೈನಲ್ ಗೆ ಅರ್ಹತೆ ಪಡೆದುಕೊಂಡಿದೆ.ದ್ವಿತೀಯ ಕ್ವಾಟರ್ ಫೈನಲ್ ಪಂದ್ಯವು ಅಮಿಟಿ ಯುನೈಟೆಡ್ ಗದ್ದೆಹಳ್ಳ (ಬಿ) ಹಾಗೂ ಕಿಪ್ಸ್ಟಾ ಮೂರ್ನಾಡು ತಂಡಗಳ ನಡುವೆ ನಡೆಯಿತು.ಪೆನಾಲ್ಟಿ ಶೂಟೌಟ್ ನಲ್ಲಿ 4-3 ಗೋಲುಗಳ ಅಂತರದಿಂದ ಕಿಪ್ಸ್ಟಾ ತಂಡವು ಗೆಲುವು ಪಡೆದು ಕ್ವಾಟರ್ ಫೈನಲ್ ಪ್ರವೇಶಿಸಿತು.
