ಗೈಡಿಂಗ್ ಗ್ರೇಸ್:ಕೊಟ್ಟಮುಡಿ ಮರ್ಕಝ್ ನಲ್ಲಿ ಪೋಷಕರ ಸಭೆ

ಗೈಡಿಂಗ್ ಗ್ರೇಸ್:ಕೊಟ್ಟಮುಡಿ ಮರ್ಕಝ್ ನಲ್ಲಿ ಪೋಷಕರ ಸಭೆ

ಕಡಂಗ: ಮರ್ಕಝುಲ್ ಹಿದಾಯಾ ಗ್ರೂಪ್ ಆಫ್ ಇನ್ಸ್ಟಿಟ್ಯೂಶನಗ ವತಿಯಿಂದ "ಗೈಡಿಂಗ್ ಗ್ರೇಸ್" ಎಂಬ ಶೀರ್ಷಿಕೆಯ ಪೋಷಕರ ಕಾರ್ಯಕ್ರಮವು ಕೊಟ್ಟಮುಡಿ ಮರ್ಕಜ್ ಶಾಲೆಯಲ್ಲಿ ನಡೆಯಿತು.

 ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟವಾದ ಗಮನ ಸೆಳೆದ ಈ ಬೃಹತ್ ಸಭೆಯಲ್ಲಿ ಮರ್ಕಝುಲ್ ಹಿದಾಯ ಅಧೀನದಲ್ಲಿರುವ ವಿವಿಧ ಸಂಸ್ಥೆಯವಿದ್ಯಾರ್ಥಿಗಳ 500ಕ್ಕೂ ಅಧಿಕ ಪೋಷಕರು ಭಾಗವಹಿಸಿದ್ದರು. ವಿದ್ಯಾರ್ಥಿಗಳ ಬೆಳವಣಿಗೆಗೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಸಭೆಯು ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಪ್ರಗತಿಯನ್ನು ಮೌಲ್ಯಮಾಪನ ಮಾಡುವಂತಹ ನಿಟ್ಟಿನಲ್ಲಿ ಬಹುಮುಖ್ಯವಾಗಿದ್ದು, ಶಾಲಾ ಪರಿಸರ, ವಿದ್ಯಾರ್ಥಿಗಳ ಸಾಧನೆ, ಪ್ರಸ್ತುತ ಸವಾಲುಗಳು ಹಾಗೂ ಮುಂದಿನ ದಿಕ್ಕುಗಳು ಎಂಬುವುದರ ಕುರಿತು ಚರ್ಚೆ ನಡೆಯಿತು.ಲೈಫ್ ಕೋಚ್ ಹಾಗೂ ಖ್ಯಾತ ತರಬೇತಿದಾರರಾದ  ಅಬ್ದು ಮಾನಿಪುರಂ ಮಾತನಾಡಿ, ಪಾಲಕರ ಪಾತ್ರ, ಮಕ್ಕಳ ಮನೋವೈಜ್ಞಾನಿಕ ಬೆಳೆವಣಿಗೆ ಕುರಿತಾಗಿ ಉಜ್ವಲ ದೃಷ್ಟಿಕೋನದ ಬಗ್ಗೆ ವಿವರಿಸಿದರು.ಮರ್ಕಝ್ ಗ್ಲೋಬಲ್ ಕೌನ್ಸಿಲ್‌ನ ಸಹ ನಿರ್ದೇಶಕರಾದ ಮರ್ಜೂಕ್ ಸಹದಿ ಮಾತನಾಡಿ ಶಿಕ್ಷಣ ಮತ್ತು ಶಿಸ್ತು ಎಂಬ ವಿಷಯದ ಬಗ್ಗೆ ವಿವರಣೆ ನೀಡಿದರು.

 MHEC ಶೈಕ್ಷಣಿಕ ನಿರ್ದೇಶಕರಾದ ಅಬ್ದುಲ್ ಖಾದರ್ ಮಾಸ್ಟರ್ ಮಾತನಾಡಿ ನವೀನ ಶೈಕ್ಷಣಿಕ ತಂತ್ರಗಳು ಮತ್ತು ವಿದ್ಯಾರ್ಥಿ ಬೆಳೆವಣಿಗೆಗೆ ಪೋಷಕರ ಸಹಕಾರದ ಮಹತ್ವವನ್ನು ವಿವರಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಮ್ಮದ್ ಹಾಜಿ (ಅಧ್ಯಕ್ಷರು, ಮರ್ಕಝ್ ಪಬ್ಲಿಕ್ ಸ್ಕೂಲ್) ವಹಿಸಿದ್ದರು.ಪ್ರಾರ್ಥನೆಯನ್ನು ಸಿ ಕೆ ಅಹ್ಮದ್ ಹಾಜಿ (MHEC ಉಪಾಧ್ಯಕ್ಷರು ನೆರವೇರಿಸಿದರು.ಸ್ವಾಗತ ಭಾಷಣವನ್ನು ಹಮೀದ್ ನಿರ್ವಾಹಕ ಮರ್ಕಜ್ ಶಾಲೆ ನೆರವೇರಿಸಿದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಇಸ್ಮಾಯಿಲ್ ಸಖಾಫಿ ಅಲ್ ಕಾಮಿಲ್ ಪ್ರಧಾನ ಕಾರ್ಯದರ್ಶಿ ಮರ್ಕಜ್ ಶಾಲೆ ನೇರವೇರಿಸಿದರು.

ವೇದಿಕೆಯಲ್ಲಿ ಮೊಯ್ದು ಕುಟ್ಟಿ ಹಾಜಿ,ಕೊಹಿನೂರ್ ಅಬ್ದು ಹಾಜಿ, ಪೆರಿಯಂಡ ಯೂಸುಫ್ ಹಾಜಿ, ಹುಸೈನ ನೂರಾನಿ,ಅಶ್ರಫ್ ಸಕಾಫಿ ಉಪಸ್ಥಿತರಿದ್ದರು.

ಪ್ರಶಸ್ತಿ ವಿತರಣೆ – ಸಾಧಕರಿಗೆ ಗೌರವ:

ಪಿಯುಸಿ, ಎಸ್ ಎಸ್ ಎಲ್ ಸಿ ಹಾಗೂ ಮದ್ರಸಾ ಬೋರ್ಡ್ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ “ಅಕಾಡಮಿಕ್ ಎಕ್ಸೆಲೆನ್ಸ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ವರದಿ: ನೌಫಲ್ ಕಡಂಗ