ಗೋಣಿಕೊಪ್ಪ: ಕಾರು ಅಪಘಾತ: ರಜೆಯಲ್ಲಿ ಬಂದಿದ್ದ ಸೈನಿಕ ಸಾವು

ಗೋಣಿಕೊಪ್ಪ: ಚೆನ್ನಂಗೊಲ್ಲಿ ಬಳಿ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಪೊನ್ನಪ್ಪಸಂತೆಯ ಬಿದ್ದಮಾಡ ಬಿಪಿನ್ ಭೀಮಯ್ಯ (36) ಮೃತ ಪಟ್ಟಿದ್ದಾರೆ. ಮದುವೆ ಮುಗಿಸಿ ತೆರಳುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆಯಲಾಗಿದೆ ಎಂದು ತಿಳಿದುಬಂದಿದೆ. ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ತರುವಷ್ಟರಲ್ಲಿ ಮೃತಪಟ್ಟಿದ್ದಾರೆ.
What's Your Reaction?






