ತಿತಿಮತಿ:ಆಟೋ ನಿಲ್ದಾಣ ಉದ್ಘಾಟನೆ: ಆಟೋ ಚಾಲಕರು ದಿನನಿತ್ಯ ಜನಸಾಮಾನ್ಯರ ಸೇವೆಯಲ್ಲಿ ತೊಡಗಿಕೊಳ್ಳುತ್ತಿರುವವರು: ಎ.ಎಸ್ ಪೊನ್ನಣ್ಣ

ತಿತಿಮತಿ:ಆಟೋ ನಿಲ್ದಾಣ  ಉದ್ಘಾಟನೆ:  ಆಟೋ ಚಾಲಕರು ದಿನನಿತ್ಯ ಜನಸಾಮಾನ್ಯರ ಸೇವೆಯಲ್ಲಿ ತೊಡಗಿಕೊಳ್ಳುತ್ತಿರುವವರು: ಎ.ಎಸ್ ಪೊನ್ನಣ್ಣ

ತಿತಿಮತಿ: ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆ ತಾಲ್ಲೂಕು ತಿತಿಮತಿ ಪಟ್ಟಣದಲ್ಲಿ, ನೂತನವಾಗಿ ಶಾಸಕರ ಅನುದಾನದಲ್ಲಿ ನಿರ್ಮಾಣಗೊಂಡ ಆಟೋ ಸ್ಟ್ಯಾಂಡ್ ಉದ್ಘಾಟನೆಯನ್ನು ಇಂದು ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ನವರು ನೆರವೇರಿಸಿದರು.   

ಆಟೋ ಸ್ಟ್ಯಾಂಡ್ ಉದ್ಘಾಟನೆ ಬಳಿಕ ಮಾತನಾಡಿದ ಮಾನ್ಯ ಶಾಸಕರು, ಆಟೋ ಚಾಲಕರು ದಿನನಿತ್ಯ ಜನಸಾಮಾನ್ಯರ ಸೇವೆಯಲ್ಲಿ ತೊಡಗಿಸಿಕೊಂಡವರಾಗಿದ್ದು, ಬಿಸಿಲು-ಮಳೆಯಿಂದ ರಕ್ಷಣೆ ಪಡೆಯಲು ಇಂತಹ ವ್ಯವಸ್ಥೆ ಅತ್ಯವಶ್ಯಕವಾಗಿತ್ತು. ಇದನ್ನು ಮನಗಂಡು ತಾನು ಕ್ಷೇತ್ರಾದ್ಯಂತ ಆಟೋ ಚಾಲಕರ ಅನುಕೂಲಕ್ಕಾಗಿ ಸುಸಜ್ಜಿತ ಆಟೋ ಸ್ಟಾಂಡ್ ನಿರ್ಮಿಸಲು ಅನುದಾನ ಒದಗಿಸಿದ್ದು, ಇದರ ಸದುಪಯೋಗವನ್ನು ಆಟೋ ಚಾಲಕರು ಹಾಗೂ ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಇದೇ ಸಂದರ್ಭದಲ್ಲಿ ಆಟೋ ಸ್ಟ್ಯಾಂಡ್ ಗಳಲ್ಲಿ ಶುಚಿತ್ವವನ್ನು ಕಾಪಾಡಬೇಕು ಹಾಗೂ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಆಟೋ ಚಾಲಕರು ಕಾರ್ಯನಿರ್ವಹಿಸಬೇಕೆಂದು ಕಿವಿಮಾತು ಹೇಳಿದರು.   

ಈ ಸಂದರ್ಭದಲ್ಲಿ, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ನವೀನ್, ಕಾಂಗ್ರೆಸ್ ಮುಖಂಡರು ಹಾಗೂ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.