ನಂಜರಾಯಪಟ್ಟಣ: ಶ್ವಾನಗಳ ಪಾಲದ ನವಜಾತ ಶಿಶು: ಜನಿಸಿದ ಕೆಲವೇ ಗಂಟೆಗಳಲ್ಲಿ ತೋಟದಲ್ಲಿ ಬಿಸಾಡಿದ ಹೆತ್ತವರು!

ನಂಜರಾಯಪಟ್ಟಣ: ಶ್ವಾನಗಳ ಪಾಲದ ನವಜಾತ ಶಿಶು:  ಜನಿಸಿದ ಕೆಲವೇ ಗಂಟೆಗಳಲ್ಲಿ ತೋಟದಲ್ಲಿ ಬಿಸಾಡಿದ ಹೆತ್ತವರು!

ನಂಜರಾಯಪಟ್ಟಣ: ಗ್ರಾಪಂ ವ್ಯಾಪ್ತಿಯ ಕಟ್ಟೆಹಾಡಿ ಸಮುದಾಯಭವನ ಬಳಿ ತೋಟದಲ್ಲಿ ನವಜಾತ ಶಿಶು ಪತ್ತೆಯಾಗಿದೆ. ಜನಿಸಿದ ಕೆಲವೇ ಗಂಟೆಗಳ ಅವಧಿಯ ಹೆಣ್ಣು ಶಿಶುವನ್ನು ತೋಟದಲ್ಲಿ ಬಿಸಾಡಿ ಹೋದ ಪರಿಣಾಮ ಶಿಶು ನಾಯಿಗಳ ಪಾಲಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ನಾಯಿಗಳನ್ನು ಓಡಿಸಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.