ಪೊನ್ನಂಪೇಟೆ ಸಿಐಟಿ ಕಾಲೇಜಿನ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ!

ಪೊನ್ನಂಪೇಟೆ:ಇಲ್ಲಿನ ಸಿಐಟಿ ಕಾಲೇಜಿನ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿನಿಯೊಬ್ಬಳು ನೇಣಿಗೆ ಶರಣಾದ ಘಟನೆ ಬುಧವಾರ ಸಂಜೆ ನಡೆದಿದೆ.ಕಾಲೇಜಿನಲ್ಲಿ ಪ್ರಥಮ ವರ್ಷದ ಎ.ಐ ML ವಿಭಾಗದ ವ್ಯಾಸಾಂಗ ಮಾಡುತ್ತಿರುವ ರಾಯಚೂರು ಮೂಲದ ವಿದ್ಯಾರ್ಥಿನಿ ತೇಜಸ್ವಿನಿ(19)ಆತ್ಮಹತ್ಯೆಗೆ ಶರಣಾಗಿದ್ದಾಳೆ.ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ಇದುವರೆಗೆ ತಿಳಿದು ಬಂದಿಲ್ಲ.