ಪ್ರತ್ಯೇಕ ಮೂರು ಕಾಫಿ ಕಳವು ಪ್ರಕರಣ: ಮೂವರು ಆರೋಪಿಗಳ ಬಂಧನ :ಹಾಕತ್ತೂರು, ಹೊಸ್ಕೇರಿ ಹಾಗೂ ಮೇಕೇರಿ ಗ್ರಾಮದಲ್ಲಿ ಕಳವಾಗಿದ್ದ ಕಾಫಿ
ಮಡಿಕೇರಿ(Coorgdaily): ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹಾಕತ್ತೂರು ಗ್ರಾಮದ ನಿವಾಸಿಯಾದ ಅಬ್ಬಾಸ್ ಎಂ.ಎ ಅವರ ದಾಸ್ತಾನು ಕೊಠಡಿಯಲ್ಲಿ ಇಟ್ಟಿದ್ದ ಅಂದಾಜು 13 ಚೀಲ ಒಣಗಿದ ಕಾಫಿಯನ್ನು 08-05-2025 ರಂದು ಮತ್ತು ಹೊಸ್ಕೇರಿ ಗ್ರಾಮ ನಿವಾದಿ ಲಾವಿನ್ ಬಿಡಿ ಅವರ ದಾಸ್ತಾನು ಕೊಠಡಿಯಲ್ಲಿ ಇಟ್ಟಿದ್ದ ಅಂದಾಜು ಐದು ಚೀಲ ಕಾಫಿಯನ್ನು 14-05-2025 ರಂದು ಹಾಗೂ ಮೇಕೇರಿ ಗ್ರಾಮದ ನಿವಾಸಿಯಾದ ದಿಗಂತರ ಅವರ ಅವರ ದಾಸ್ತಾನು ಕೊಠಡಿಯಲ್ಲಿ ಇಟ್ಟಿದ್ದ ಅಂದಾಜು 15 ಚೀಲ ಕಾಫಿಯನ್ನು 19-05-2025 ರಂದು ಕಳ್ಳತನವಾಗಿರುವ ಕುರಿತು ದೂರು ಸ್ವೀಕರಿಸಲಾಗಿತ್ತು.ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೂರು ಪ್ರತ್ಯೇಕ ಪ್ರಕರಣ ದಾಖಾಲಗಿತ್ತು.ಇದೀಗ ಮೇ 27 ರಂದು 03 ಆರೋಪಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಯಶಸ್ಸು ಕಂಡಿದೆ.ಸುಂಟ್ಟಿಕೊಪ್ಪ ಗ್ರಾಮದ ಮಹೇಶ್ (44), ಮದೆ ಗ್ರಾಮದ ವಿನೋದ್ ಕೆ.ಆರ್ (39) ಗಾಳಿಬೀಡು ಎರಡನೇ ಮೊಣ್ಣಂಗೇರಿ ಗ್ರಾಮದ ಕೆ.ಎಂ ರಾಮಯ್ಯ ( 28) ಎಂಬುವರನ್ನು ಬಂಧಿಸಲಾಗಿದೆ.ಮೂವರು ಆರೋಪಿಗಳು ಕೂಡ ಮೂರು ಪ್ರಕರಣಗಳಲ್ಲಿಯೂ ಸಹ ಕಾಫಿ ಕಳವು ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.ಮೂರು ಪ್ರಕರಣಗಳಲ್ಲಿ 31 ಚೀಲ ಕಾಫಿ,ಒಂದು ಮಾರುತಿ ಈಕೋ ವಾಹನ,ರಾಡ್ ಕಟ್ಟರ್ ಹಾಗೂ ಕಬ್ಬಿಣ ಹಾರೆ ವಶಪಡಿಸಿಕೊಳ್ಳಲಾಗಿದೆ.