ಮೂರ್ನಾಡು: ಮುಸ್ಲಿಂ ಜಮಾಅತ್ ಅಧ್ಯಕ್ಷರಾಗಿ ಕೆ.ಎ ಅಬ್ದುಲ್ ಮಜೀದ್ ಆಯ್ಕೆ

ಮೂರ್ನಾಡು: ಮುಸ್ಲಿಂ ಜಮಾಅತ್  ಅಧ್ಯಕ್ಷರಾಗಿ  ಕೆ.ಎ ಅಬ್ದುಲ್ ಮಜೀದ್ ಆಯ್ಕೆ
ಮೂರ್ನಾಡು: ಮುಸ್ಲಿಂ ಜಮಾಅತ್  ಅಧ್ಯಕ್ಷರಾಗಿ  ಕೆ.ಎ ಅಬ್ದುಲ್ ಮಜೀದ್ ಆಯ್ಕೆ

ಮಡಿಕೇರಿ:-ಮೂರ್ನಾಡು ಮುಸ್ಲಿಂ ಜಮಾಅತ್ ನ ವಾರ್ಷಿಕ ಮಹಾಸಭೆಯು ಹಿರಿಯರಾದ ಡಾ‌.ಕುಂಞಿ ಅಬ್ದುಲ್ಲ ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಸ್ಥಳೀಯ ಖತೀಬರಾದ ರಶೀದ್ ಇರ್ಶಾದಿ ರವರ ಪ್ರಾಥನೆಯೊಂದಿಗೆ ಆರಂಭಗೊಂಡ ಸಭೆಯಲ್ಲಿ ಮಹಾಸಭೆಯ ವಾರ್ಷಿಕ ವರದಿ ಮತ್ತು ಲೆಕ್ಕಪತ್ರವನ್ನು ಮಂಡಿಸಲಾಯಿತು.

ನಂತರ ನೂತನ ಮೂರ್ನಾಡು ಮುಸ್ಲಿಂ ಜಮಾಅತ್ ಆಡಳಿತ ಮಂಡಳಿ ಅಧ್ಯಕ್ಷರಾಗಿ ಕೆ.ಎ ಅಬ್ದುಲ್ ಮಜೀದ್,ಉಪಾಧ್ಯಕ್ಷರಾಗಿ ಎಂ.ಎ ರಿಯಾಜ್ ಪಾಶಾ,ಪ್ರಧಾನ ಕಾರ್ಯದರ್ಶಿ ಕೆ.ಎ ಖಾಸಿಂ,ಕಾರ್ಯದರ್ಶಿ ಪಿಎಸ್ ನಾಸಿರ್, ಜಂಟಿ ಕಾರ್ಯದರ್ಶಿಗಳಾಗಿ ಕೆಎ ಅಹ್ಮದ್,ಎಂಎಸ್ ಶಫೀಕ್,ಖಜಾಂಚಿಯಾಗಿ ಎ.ಎಂ ಸಾದಿರ್,ಸದಸ್ಯರುಗಳಾಗಿ ಎಂ.ಎ ಮಮ್ಮದಾಲಿ,ಪಿ.ಎಂ ಅಲವಿ, ಕೆ ಎಚ್ ಯಾಕೂಬ್,ಯು.ಎಂ,ಮುಸ್ತಫಾ,ಕೆ.ಎ ಕಾದರ್,ಸಿ.ಎಂ ಸೈಯದ್ ಅಲವಿ, (ಕುಂಞಿಪ್ಪ), ಕೆಎಚ್ ಜುಬೈರ್ ಅವರನ್ನು ಆಯ್ಕೆ ಮಾಡಲಾಯಿತು.