ಮೊಗೇರ ಕ್ರಿಕೆಟ್ ಕಪ್: ಮೊಗೇರ ಸಮಾಜ ಬಾಂಧವರಿಗೆ ಸಮುದಾಯ ಭವನ ನಿರ್ಮಿಸಿಕೊಡಲು ಒತ್ತಾಯ

ಮೊಗೇರ ಕ್ರಿಕೆಟ್ ಕಪ್: ಮೊಗೇರ ಸಮಾಜ ಬಾಂಧವರಿಗೆ ಸಮುದಾಯ ಭವನ ನಿರ್ಮಿಸಿಕೊಡಲು ಒತ್ತಾಯ

ಮಡಿಕೇರಿ- ಮಂಜಿನ ನಗರಿ ಮಡಿಕೇರಿಯಲ್ಲಿ ಅಮೃತ ಯುವ ಮೊಗೇರ ಅಮ್ಮತಿ ಹೋಬಳಿ ಸಿದ್ದಾಪುರ (ರಿ) ಇವರ ವತಿಯಿಂದ 3ನೇ ವರ್ಷದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯ ಸಮಾರೋಪ ಸಮಾರಂಭವು ಅಮೃತ ಯುವ ಮೊಗೇರ ಸೇವಾ ಸಮಾಜ ಅಮ್ಮತಿ ಸಿದ್ದಾಪುರ ಹೋಬಳಿ (ರಿ) ಅಧ್ಯಕ್ಷರಾದ ರಾಮು ಪಿ.ಎನ್. ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ಪಾಲ್ಗೊಂಡಿದ್ದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಕೆಲಸ ಆಗಬೇಕಿದೆ. ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮಕ್ಕಳ ಉತ್ತಮ ಬೆಳವಣಿಗೆ. ಸಮುದಾಯಗಳ ಸಾಮರಸ್ಯಕ್ಕೆ ಕಾರಣವಾಗುತ್ತದೆ ಎಂದರು .

ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಅಧ್ಯಕ್ಷರಾದ ಜನಾರ್ಧನ್ ಮಾತನಾಡಿ ಕ್ರೀಡೆಯು ವ್ಯಕ್ತಿಯ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಸಮತೋಲನದಲ್ಲಿಡುವುದರ ಜೊತೆಗೆ ನಮ್ಮಸಮುದಾಯದ ಜನಾಂಗದ ಸಂಬಂಧ ಬೆಸೆಯಲು ಸಹಕಾರಿಯಾಗಿದೆ .ಎಂದರು ಹಾಗೆಯೇ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣರವರ ಬಳಿ ಮೊಗೇರ ಜನಾಂಗದವರು ಸರಿ ಸುಮಾರು 40 ಸಾವಿರ ಮೇಲೆ ಜನ ಸಂಖ್ಯೆ ಇದ್ದು ನಮ್ಮ ಮೊಗೇರ ಸಮಾಜಕ್ಕೆ ಕೊಡಗಿನಲ್ಲಿ ಒಂದು ಸಮುದಾಯ ಭವನದ ಅವಶ್ಯಕತೆ ಇದೆ ಮೊಗೇರ ಸಮಾಜದ ಕಾರ್ಯಕ್ರಮಕ್ಕೆ ಸಮುದಾಯ ಭವನವನ್ನು ನಿರ್ಮಿಸಿ ಕೊಡುವಂತೆ ಮನವಿಯನ್ನು ಮಾಡಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಹಾಗೂ ಕೊಡಗು ಜಿಲ್ಲಾ ಬಿಜೆಪಿ ಎಸ್ ಸಿ ಮೋರ್ಚಾ ದ ಅಧ್ಯಕ್ಷರಾದ ಪಿ. ಎಂ. ರವಿ ರವರು ಮಾತನಾಡಿ ಕ್ರೀಡೆಯಿಂದ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗಲು ಸಾಧ್ಯ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಹೊಂದಾಣಿಕೆ ಮನೋಭಾವ ಬರುತ್ತದೆ. ಪ್ರತಿನಿತ್ಯ ಅತ್ಯಂತ ಕ್ರಿಯಾಶೀಲರಾಗಿ ಕರ್ತವ್ಯನಿರ್ವಹಿಸಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದರು.

ಕ್ರೀಡಾ ಕೂಟದಲ್ಲಿ 10 ನೇ ತರಗತಿಯಲ್ಲಿ 60% ಮೇಲೆ ಅಂಕ ಪಡೆದ 10 ವಿದ್ಯಾರ್ಥಿಗಳಾದ, ಅಂಕಿತ ಸೋಮವಾರಪೇಟೆ, ಚಂಪಾಕ್ ಮರಗೋಡು, ಕೃತಿಕಾ ಎಂ.ಎಸ್. ಅಮ್ಮತಿ, ದಿವ್ಯ, ಅನುಷಾ ಮಡಿಕೇರಿ ಶ್ರೇಯ, ಸುಪ್ರೀತ್,ಚೈತ್ರ,ರವರಿಗೆಮೊಗೇರ ಸೇವಾ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

ವರದಿ:ಅಶೋಕ್ ಮಡಿಕೇರಿ