ರಸ್ತೆ ಕೂಗಿಗೆ ಸ್ಪಂದಿಸಿದ ಎ.ಎಸ್ ಪೊನ್ನಣ್ಣ: ಕಕ್ಕಬ್ಬೆ ಕುಂಜಿಲ ಪತ್ತಂಗೋಡು ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಯಾಗಿದ್ದ ರಸ್ತೆಗೆ ಕೊನೆಗೂ ಸಿಕ್ತು‌ ಮುಕ್ತಿ

ರಸ್ತೆ ಕೂಗಿಗೆ ಸ್ಪಂದಿಸಿದ ಎ.ಎಸ್ ಪೊನ್ನಣ್ಣ: ಕಕ್ಕಬ್ಬೆ ಕುಂಜಿಲ ಪತ್ತಂಗೋಡು ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಯಾಗಿದ್ದ ರಸ್ತೆಗೆ ಕೊನೆಗೂ ಸಿಕ್ತು‌ ಮುಕ್ತಿ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು : ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಜಿಲ ಪತ್ತಂಗೋಡು ಗ್ರಾಮಸ್ಥರ ಕಳೆದ ಹಲವು ದಶಕಗಳ ಬೇಡಿಕೆಯಾಗಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಯು ಪೂರ್ಣಗೊಂಡು ಕೊನೆಗೂ ಮುಕ್ತಿ ಸಿಕ್ಕಿದಂತಾಗಿದೆ.

ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವಾರು ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದು ಕುಂಜಿಲ ಗ್ರಾಮದ ಪತ್ತಂಗೋಡಿಗೆ ತೆರಳುವ ರಸ್ತೆ ಕಾಮಗಾರಿ ಬಾಕಿ ಉಳಿದಿತ್ತು. ಈ ರಸ್ತೆ ಕಾಮಗಾರಿಯನ್ನು ನಡೆಸಿಕೊಡುವಂತೆ ಪತ್ತಂಗೋಡು ನಿವಾಸಿಗಳು ಪಂಚಾಯಿತಿ ಸದಸ್ಯರಾದ ಕುಂಡಂಡ ರಜಾಕ್,ಕಕ್ಕಬ್ಬೆ ವಲಯಾಧ್ಯಕ್ಷರಾದ ಕಲಿಯಂಡ ಸಂಪನ್ ಅಯ್ಯಪ್ಪ, ಕೆಡಿಪಿ ಸದಸ್ಯರಾದ ಬಾಚಮಂಡ ಲವ ಚಿಣ್ಣಪ್ಪ ಅವರುಗಳಲ್ಲಿ ಮನವಿ ಮಾಡಿದ್ದರು. ಈ ರಸ್ತೆ ನಿರ್ಮಾಣದ ಬಗ್ಗೆ ಇವರುಗಳು ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಅವರ ಗಮನಕ್ಕೆ ತಂದ ಮೇರೆಗೆ ತಕ್ಷಣ ಸ್ಪಂದಿಸಿದ ಶಾಸಕ ಪೊನ್ನಣ್ಣ ಈ ಹಿಂದೆ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ್ದರು. ಈಗ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು ನೂತನ ಕಾಂಕ್ರೀಟ್ ರಸ್ತೆಯನ್ನು ಶಾಸಕರ ನಿರ್ದೇಶನದಂತೆ ಗ್ರಾಮ ಪಂಚಾಯಿತಿ ಸದಸ್ಯ ಕುಂಡಂಡ ರಜಾಕ್ ಹಾಗೂ ಪಕ್ಷದ ಪ್ರಮುಖರು ಉದ್ಘಾಟಿಸಿದರು. ಹಲವು ವರ್ಷಗಳ ಬೇಡಿಕೆಗೆ ಸ್ಪಂದಿಸಿ ನೂತನ ರಸ್ತೆನಿರ್ಮಿಸಿಕೊಟ್ಟ ಶಾಸಕ ಎ.ಎಸ್.ಪೊನ್ನಣ್ಣ, ಪಂಚಾಯಿತಿ ಸದಸ್ಯ ಕುಂಡಂಡ ರಜಾಕ್, ಸಂಪನ್ ಅಯ್ಯಪ್ಪ, ಬಾಚಮಂಡ ಲವ ಚಿಣ್ಣಪ್ಪ ಅವರಿಗೆ ಇದೇ ಸಂದರ್ಭ ಪತ್ತಂಗೋಡು ನಿವಾಸಿಗಳು ಕೃತಜ್ಞತೆ ಸಲ್ಲಿಸಿದರು.

 ಈ ಸಂದರ್ಭ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವೈ.ಕೆ.ಹಂಸ, ಬೂತ್ ಅಧ್ಯಕ್ಷ ಪತ್ತಂಗೋಡು ಮೂಸ, ಅಬೂಬಕ್ಕರ್, ಉಸ್ಮಾನ್,ಹಮೀದ್,ಝುಬೈರ್, ಅಹಮದ್ ಮುಸ್ಲಿಯಾರ್ ಮತ್ತಿತರರು ಹಾಜರಿದ್ದರು.