ವಿಶು ಕಪ್ ಫುಟ್ಬಾಲ್ ಪಂದ್ಯಾವಳಿ: ಮಿಡ್ ಸಿಟಿ ಸುಂಟ್ಟಿಕೊಪ್ಪ ಚಾಂಪಿಯನ್ಸ್ ಅನಿ ಫ್ರೆಂಡ್ಸ್ ಕಲ್ಲುಬಾಣೆ ರನ್ನರ್ಸ್
ವಿರಾಜಪೇಟೆ: ಹಿಂದೂ ಮಲಯಾಳಿ ಅಸೋಸಿಯೇಷನ್ (ರಿ) ವಿರಾಜಪೇಟೆ ವತಿಯಿಂದ ವಿಶು ಹಬ್ಬದ ಪ್ರಯುಕ್ತ ಹೊನಲು ಬೆಳಕಿನ ರಾಷ್ಟ್ರ ಮಟ್ಟದ 5+2 ಕಾಲ್ಚೆಂಡು ಪಂದ್ಯಾಟವು ವಿರಾಜಪೇಟೆ ತಾಲೂಕು ಮೈದಾನದಲ್ಲಿ ಏರ್ಪಡಿಸಲಾಗಿತ್ತು. 18-04-2025 ರಿಂದ ಆರಂಭವಾದ ಪಂದ್ಯಾಟವು 20 ರಂದು ಕೊನೆಗೊಂಡಿತ್ತು. ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ಕೇರಳ ರಾಜ್ಯ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಒಟ್ಟು 16 ತಂಡಗಳು ಭಾಗವಹಿಸಿದ್ದವು. ವಿದೇಶಿ ಆಟಗಾರರ ಪ್ರದರ್ಶನ ಕ್ರೀಡಾ ಪ್ರೇಮಿಗಳಿಗೆ ಸಂತಸ ತಂದಿತ್ತು. ಪ್ರಥಮ ಸೆಮಿ ಫೈನಲ್ ಪಂದ್ಯಾವು ಸಿದ್ದಾಪುರ ಮತ್ತು ಕಲ್ಲು ಬಾಯ್ಸ್ ಅನಿ ಫ್ರೇಂಡ್ಸ್ ಕಲ್ಲುಬಾಣೆ ತಂಡಗಳ ಮಧ್ಯೆ ನಡೆದು 02-01 ಗೋಲು ನೆರವಿನಿಂದ ಕಲ್ಲು ಬಾಯ್ಸ್ ಅನಿ ಫ್ರೆಂಡ್ಸ್ ಕಲ್ಲುಬಾಣೆ ಗೆದ್ದು ಫೈನಲ್ ಪ್ರವೇಶ ಪಡೆಯಿತು. ದ್ವಿತೀಯ ಸೆಮಿಫೈನಲ್ ಪಂದ್ಯಾಟವು ಮಿಡ್ ಸಿಟಿ ಸುಂಟಿಕೊಪ್ಪ ಮತ್ತು ಫಿಫಾ ಪೆರುಂಬಾಡಿ ತಂಡಗಳ ಮಧ್ಯೆ ಪಂದ್ಯ ನಡೆದು ಉಭಯ ತಂಡಗಳು ಗೋಲು ಗಳಿಸಲು ಶಕ್ತವಾಗಲಿಲ್ಲ. ಪೆನಾಲ್ಟಿ ಶೂಟೌಟ್ ನಲ್ಲಿ 0-1 ಗೋಲುಗಳಿಂದ ಮಿಡ್ ಸಿಟಿ ಸುಂಟಿಕೊಪ್ಪ ತಂಡ ವಿಜಯಾಗಿ ಫೈನಲ್ ಗೆ ಅರ್ಹತೆ ಪಡೆಯಿತು. ಫೈನಲ್ ಪಂದ್ಯಾಟವು ಮಿಡ್ ಸಿಟಿ ಸುಂಟಿಕೊಪ್ಪ ಮತ್ತು ಕಲ್ಲು ಬಾಯ್ಸ್ ಅನಿ ಫ್ರೆಂಡ್ಸ್ ಕಲ್ಲುಬಾಣೆ ತಂಡಗಳ ಮಧ್ಯೆ ಬಿರುಬಿರಿಸಿನ ಪಂದ್ಯಾಟ ನಡೆಯಿತು. ನಿಗದಿತ ಅವಧಿಯಲ್ಲಿ ಉಭಯ ತಂಡಗಳು ಗೋಲುಗಳಿಸಲು ವಿಫಲವಾಯಿತು. ನಂತರ ಪೆನಾಲ್ಟಿ ಶೂಟೌಟ್ ನಲ್ಲಿ 1-0 ಗೋಲುಗಳಿಂದ ಮಿಡ್ ಸಿಟಿ ಸುಂಟಿಕೊಪ್ಪ ತಂಡವು ವಿಜಯವಾಯಿತು. ಇಶಾಮ್ ಮಂಗಳೂರು ಗಣೇಶ್ ಮತ್ತು ರಾಜೇಶ್ ಕನ್ಯಾಕುಮಾರಿ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿದರು.
ಚಾಂಪಿಯನ್ ತಂಡಕ್ಕೆ ಒಂದು ಲಕ್ಷ ನಗದು ಬಹುಮಾನ:
ಪ್ರಥಮ ಸ್ಥಾನಗಳಿಸಿದ ತಂಡಕ್ಕೆ ಒಂದು ಲಕ್ಷ ರೂ ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 75 ಸಾವಿರ ನಗದು ಮತ್ತು ಟ್ರೋಫಿ ನೀಡಿ ಗೌರವಿಸಲಾಯಿತು. ಸಿ.ವೈ.ಸಿ ಒಂಟಿಅಂಗಡಿ ಉತ್ತಮ ತಂಡ, ಉತ್ತಮ ಮುನ್ನಡೆ ಆಟಗಾರ ಜಿಂಜರಿ, ಉತ್ತಮ ಗೋಲ್ ಕೀಪರ್ ಪ್ರವೀಣ್, ಸರಣಿ ಶ್ರೇಷ್ಟ ಪಾಂಡ್ಯನ್, ಸರಣಿ ಪುರುಶೋತ್ತಮ ಅದೀಲ್, ಆಲ್ ರೌಂಡರ್ ವಿಜು ಅವರುಗಳು ತಮ್ಮ ವ್ಯಯುಕ್ತಿಕ ಪ್ರಶಸ್ತಿಗಳನ್ನು ಪಡೆದುಕೊಂಡರು.
ಹಿಂದೂ ಮಲಯಾಳಿ ಅಸೋಶಿಯೇಷನ್ (ರಿ) ವಿರಾಜಪೇಟೆ ಪದಾಧಿಕಾರಿಗಳು, ಸದಸ್ಯರು, ವಿವಿಧ ತಂಡಗಳ ಮಾಲೀಕರು, ಕ್ರೀಡಾ ಪಟುಗಳು, ಜನಾಂಗ ಬಾಂಧವರು, ಕ್ರೀಡಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
What's Your Reaction?






