ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಕುಚಿ೯ ಉಳಿದದ್ದೇ ಕಾಂಗ್ರೆಸ್ ನ ಎರಡು ವಷ೯ಗಳ ಸಾಧನೆ: ಮಾಜಿ ಸಂಸದ ಪ್ರತಾಪ್ ಸಿಂಹ

ಮಡಿಕೇರಿ: ರಾಜ್ಯ ಸಕಾ೯ರ ಮಿತಿ ಮೀರಿ ಸಾಲ ಮಾಡಿ ರಾಜ್ಯವನ್ನು ದಿವಾಳಿ ಮಾಡಿದೆ.ಕನಾ೯ಟಕದ ಪ್ರತೀ ವ್ಯಕ್ತಿಯ ಮೇಲೆ 12 ಸಾವಿರ ರೂ ಸಾಲದ ಹೊರೆಯಿದೆ.ಸಿದ್ದರಾಮಯ್ಯ ನೇತೖತ್ವದ ಕಾಂಗ್ರೆಸ್ ಸಕಾ೯ರ ರಾಜ್ಯದ ಜನತೆಗೆ ನೀಡಿರುವ ಕೊಡುಗೆ ಇದು ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಮಡಿಕೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸಕಾ೯ರಕ್ಕೆ ಎರಡು ವಷ೯ ತುಂಬಿದ ಹಿನ್ನಲೆಯಲ್ಲಿ ನಾಳೆ ಸಾಧನಾ ಸಮಾವೇಶ ಆಯೋಜಿಸಲಾಗಿದೆ.ಯಾವ ಸಾಧನೆ ಮಾಡಿದ್ದಾರೆಂದು ಈ ಸಮಾವೇಶ ಮಾಡುತ್ತಿದ್ದಾರೆ.ಶಕ್ತಿ ಯೋಜನೆಯಿಂದಾಗಿ ಲಾಭದಲ್ಲಿದ್ದ ಕೆ.ಎಸ್.ಆರ್.ಟಿ. ನಷ್ಟದಲ್ಲಿ ಮುಳುಗಿದೆ.ಡ್ರೈವರ್, ಕಂಡಕ್ಟರ್ ಗಳಿಗೆ ವೇತನ ಕೊಡಲೂ ಸಾಧ್ಯವಾಗದ ಹೀನಾಯ ಸ್ಥಿತಿಗೆ ಸಕಾ೯ರ ತಲುಪಿದೆ.ಅನ್ನಭಾಗ್ಯ ಯೋಜನೆಗೆ ಅಕ್ಕಿಯನ್ನು ಕೇಂದ್ರದಿಂದ ಖರೀದಿಸಲು ಕೂಡ ರಾಜ್ಯ ಸಕಾ೯ರದ ಬಳಿ ಹಣವಿಲ್ಲ.ಉಚಿತ ಕರೆಂಟ್ ಕೊಡುತ್ತೇವೆಂದು ಹೇಳಿಕೊಂಡ ಸಕಾ೯ರ ಸರಿಯಾಗಿ ಕರೆಂಟ್ ಕೂಡ ಕೊಡುತ್ತಿಲ್ಲ. ವಿದ್ಯುತ್ ನಿಗಮಗಳು ನಷ್ಯದಲ್ಲಿ ಮುಳುಗುವಂತಾಗಿದೆ ಎಂದು ಪ್ರತಾಪ್ ಸಿಂಹ ಅವರು ಆರೋಪಿಸಿದರು.ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಕುಚಿ೯ ಉಳಿದದ್ದೇ ಕಾಂಗ್ರೆಸ್ ನ ಎರಡು ವಷ೯ಗಳ ಸಾಧನೆಯಾಗಿದೆ ಎಂದು ಪ್ರತಾಪ್ ಸಿಂಹ ಟೀಕಿಸಿದರು.ರಾಜ್ಯವ್ಯಾಪಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಗಳಿಗೆ ಚುನಾವಣೆಯನ್ನೇ ನಡೆಸಲು ಕಾಂಗ್ರೆಸ್ ಸಕಾ೯ರಕ್ಕೆ ಇನ್ನೂ ಸಾಧ್ಯವಾಗಿಲ್ಲ.ವಿನಯ್ ಸೋಮಯ್ಯ ಸಾವಿಗೆ ಕಾರಣನಾದ ಕಾಂಗ್ರೆಸ್ಸಿಗನನ್ನು ಬಂಧಿಸಲು ಇನ್ನೂ ಸಾಧ್ಯವಾಗಿಲ್ಲ. ಶಾಸಕರ ಕೖಪಾಕಟಾಕ್ಷ ಈ ವ್ಯಕ್ತಿಯ ಮೇಲಿದೆ.ಮೂನಾ೯ಡಿನಲ್ಲಿ ಮಹಿಳಾ ಪೊಲೀಸ್ ಮೇಲೆಯೇ ಕಾಂಗ್ರೆಸ್ ಮುಖಂನೋವ೯ನಿಂದ ಹಲ್ಲೆ ನಡೆದರೂ ಕ್ರಮ ಕೈಗೊಂಡಿಲ್ಲ.
ಕೊಡಗು ವಿಶ್ವವಿದ್ಯಾನಿಲಯಕ್ಕೆ ಬಾಗಿಲು ಹಾಕಲು ಮುಂದಾಗಿರುವುದು ಕೂಡ ಕಾಂಗ್ರೆಸ್ ಸಕಾ೯ರದ 2 ವಷ೯ಗಳ ಸಾಧನೆಯಾಗಿದೆ ಎಂದು ಪ್ರತಾಪ್ ಸಿಂಹ ಆಕ್ರೋಷ ಹೊರಹಾಕಿದರು.
ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಎರಡು ವಷ೯ಗಳಲ್ಲಿ ಕೊಡಗಿನ ಅಭಿವೖದ್ದಿಗೆ ಇಬ್ಬರೂ ಶಾಸಕರು ತಂದಿರುವ ಅನುದಾನದ ಪೂಣ೯ ಮಾಹಿತಿ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.
ಮಾಜಿ ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ, ಕಾಂಗ್ರೆಸ್ ಸಕಾ೯ರ ಯಾವುದೇ ಸಾಧನೆ ಮಾಡದೇ ಹೋದರೂ ಸಾಧನೆ ಮಾಡಿದ್ದೇವೆ ಎಂದು ಬೊಗಳೆ ಬಿಡಲು ಸಾಧನಾ ಸಮಾವೇಶ ಆಯೋಜಿಸಿದೆ ಎಂದು ಟೀಕಿಸಿದರು. ಕೊಡಗಿನ ಜನತೆಯನ್ನು ಶಾಸಕರು ಎಲ್ಲಾ ಸಂದಭ೯ದಲ್ಲಿ ಮೂಖ೯ರನ್ನಾಗಿ ಮಾಡಲು ಸಾಧ್ಯವಿಲ್ಲ.ಕೊಡಗಿನ ಜನತೆಗೂ ಸತ್ಯದ ಅರಿವಾಗುತ್ತಿದೆ ಎಂದು ಬೋಪಯ್ಯ ಹೇಳಿದರು.
ಕೊಡಗು ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ, ಪ್ರಧಾನ ಕಾಯ೯ದಶಿ೯ಗಳಾದ ಮಹೇಶ್ ಜೈನಿ, ನೆಲ್ಲೀರ ಚಲನ್ ಸುದ್ದಿಗೋಷ್ಟಿಯಲ್ಲಿದ್ದರು