ಸಿದ್ದಾಪುರ: ಗ್ರಾಮೀಣ ವ್ಯಾಪ್ತಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಸಿದ್ದಾಪುರ:-ಬೆಂಗಳೂರು ಮೂಲದ ಟ್ರಾನ್ಸ್ ಫಾರ್ಮಿಂಗ್ ಟುಮಾರೊ ಫೌಂಡೇಶನ್ ನೇತೃತ್ವದಲ್ಲಿ ಆಸ್ಟೆರ್ ವಾಲೆಂಟಿಯರ್ಸ್ ಹಾಗೂ 09 ಸೊಲ್ಯೂಷನ್ಸ್ ರವರ ಸಹಯೋಗದಲ್ಲಿ ಕರ್ನಾಟಕ ಚಾಲಕರ ಸಮೂಹದ ಸಹಕಾರದೊಂದಿಗೆ ಮೊಬೈಲ್ ಮೆಡಿಕಲ್ ಯೂನಿಟ್ ಸಂಚಾರಿ ವಾಹನದ ಮೂಲಕ ಸಿದ್ದಾಪುರದಲ್ಲಿ ಉಚಿತ ಅರೋಗ್ಯ ತಪಾಸಣಾ ಶಿಬಿರವನ್ನ ಆಯೋಜಿಸಲಾಗಿತ್ತು ಆಟೋ ಚಾಲಕರು,ವಾಹನ ಚಾಲಕರು,ಕಾರ್ಮಿಕರು,ಸ್ಥಳೀಯರು ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನ ಪಡೆದುಕೊಂಡರು .
ಕೊಡಗಿನ ಪ್ರಾಜೆಕ್ಟ್ ಮೆನೇಜರ್ ಬಿ. ಹೆಚ್. ಸಂಪ್ರೀತ್ ಮಾತನಾಡಿ ಟ್ರಾನ್ಸ್ ಫಾರ್ಮಿಂಗ್ ಟುಮಾರೊ ಫೌಂಡೇಶನ್ ಎನ್ ಜಿ ಒ ಸಂಸ್ಥೆಯ ಸಂಸ್ಥಾಪಕರಾದ ಆನಂದ ರಾವ್ ಅವರು ಗ್ರಾಮೀಣ ಜನರ ಆರೋಗ್ಯ ಕಾಳಜಿಯಿಂದ ಆಸ್ಟೆರ್ ವಾಲೆಂಟಿಯರ್ಸ್ ಹಾಗೂ o9 ಸೊಲ್ಯೂಷನ್ಸ್ ರವರ ಸಹಯೋಗದಲ್ಲಿ ಕೊಡಗಿನ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಸಂಚರಿಸಿ ಜನರಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರ ನಡೆಸುತ್ತಿದೆ. ಅಧಿಕ ರಕ್ತದೊತ್ತಡ, ಮಧುಮೇಹ, ಬಿಎಂಐ, ತೂಕ, ಈ. ಸಿ. ಜಿ. ಮುಂತಾದ ಪರೀಕ್ಷೆಗಳನ್ನು ನಡೆಸಲಿದ್ದು, ಇದು ಒಬ್ಬ ವೈದ್ಯರು, ನರ್ಸ್, ಹಾಗೂ ಚಾಲಕರ ತಂಡವನ್ನು ಒಳಗೊಂಡಿರುತ್ತದೆ. ಒಂದು ದಿವಸಕ್ಕೆ ಒಂದು ಗ್ರಾಮದಂತೆ ನಿರಂತರ 10ವರ್ಷಗಳ ಅವಧಿಗೆ ಕಾರ್ಯ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸಲಿದೆ. ಇದು ಕೊಡಗಿನ ಕಾರ್ಮಿಕರು, ವಾಹನ ಚಾಲಕರು,ಸಾಮಾನ್ಯ ಜನರು ಹಾಗೂ ಬಡವರ ಆರೋಗ್ಯವನ್ನು ಅವರ ಗ್ರಾಮಕ್ಕೆ ತೆರಳಿ ತಪಾಸಣೆ ಮಾಡುವುದರ ಮೂಲಕ ಔಷಧಿಯೊಂದಿಗೆ ಆರೋಗ್ಯ ಆರೈಕೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಡಾ.ಮೇಘಾ , ನರ್ಸ್, ವೀರಮ್ಮ ಪ್ರಮುಖರಾದ ನವೀನ್ ಕುಮಾರ್,ವಿನೋದ್ ಸೇರಿದಂತೆ ಮತ್ತಿತರರು ಹಾಜರಿದ್ದರು.
What's Your Reaction?






