ಸುಂಟ್ಟಿಕೊಪ್ಪ: ಗಾಂಜಾ ಮಾರಾಟ ಓರ್ವ ಬಂಧನ

Jun 8, 2025 - 09:22
 0  111
ಸುಂಟ್ಟಿಕೊಪ್ಪ: ಗಾಂಜಾ ಮಾರಾಟ ಓರ್ವ ಬಂಧನ

ಸುಂಟ್ಟಿಕೊಪ್ಪ:ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಮಾಲು ಸಮೇತ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸುಂಟಿಕೊಪ್ಪ ಸಮೀಪದ ನಾಕೂರು ಶಿರಂಗಾಲ ಗ್ರಾಮದ ರಾಜೇಶ್ ಎಂಬಾತ ಬಂಧನಕ್ಕೊಳಗಾಗಿರುವ ಆರೋಪಿ.ಶನಿವಾರ ಸುಂಟಿಕೊಪ್ಪ ಎಮ್ಮೆಗುಂಡಿ ರಸ್ತೆಯಲ್ಲಿ ಈತ ಬ್ಯಾಗ್ ನಲ್ಲಿ ಗಾಂಜಾವನ್ನು ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿರುವ ಪೊಲೀಸರು ಆರೋಪಿ ರಾಜೇಶನನ್ನು ಬಂಧಿಸಿ 150 ಗ್ರಾಮ್ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0