₹60 ಕೋಟಿ ವಂಚನೆ ಪ್ರಕರಣ: ಶಿಲ್ಪಾ ಶೆಟ್ಟಿ–ರಾಜ್ ಕುಂದ್ರಾ ದಂಪತಿ ವಿಚಾರಣೆ

Oct 7, 2025 - 11:06
 0  199
₹60 ಕೋಟಿ ವಂಚನೆ ಪ್ರಕರಣ: ಶಿಲ್ಪಾ ಶೆಟ್ಟಿ–ರಾಜ್ ಕುಂದ್ರಾ ದಂಪತಿ ವಿಚಾರಣೆ
Photo credit: The times of inda

ಮುಂಬೈ: ₹60 ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಹಾಗೂ ಅವರ ಪತಿ ರಾಜ್ ಕುಂದ್ರಾ ಅವರನ್ನು ಮುಂಬೈ ಪೊಲೀಸ್‌ನ ಆರ್ಥಿಕ ಅಪರಾಧ ವಿಭಾಗ (EOW) ವಿಚಾರಣೆಗೊಳಪಡಿಸಿದೆ.

ಅಧಿಕಾರಿಗಳ ಮಾಹಿತಿಯಂತೆ, ಶಿಲ್ಪಾ–ರಾಜ್ ದಂಪತಿಗಳು ಸೇರಿದಂತೆ ಐವರನ್ನು ಸುಮಾರು ನಾಲ್ಕೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ. ವಿಚಾರಣೆಯ ವೇಳೆ ವಂಚನೆ ಆರೋಪಕ್ಕೆ ಸಂಬಂಧಿಸಿದ ಹಣಕಾಸು ವ್ಯವಹಾರಗಳು, ಹೂಡಿಕೆ ಒಪ್ಪಂದಗಳು ಹಾಗೂ ಕಂಪನಿ ದಾಖಲೆಗಳ ಕುರಿತು ಪ್ರಶ್ನೆಗಳು ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಪ್ರಕರಣದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಕಳೆದ ಸೆಪ್ಟೆಂಬರ್ 5ರಂದು ಶಿಲ್ಪಾ ಶೆಟ್ಟಿ ಮತ್ತು ರಾಜ್ ಕುಂದ್ರಾ ವಿರುದ್ಧ ಲುಕ್‌ಔಟ್‌ ನೋಟಿಸ್‌‌ ಜಾರಿಗೊಳಿಸಿದ್ದರು. ದಂಪತಿಗಳು ಆಗಾಗ್ಗೆ ವಿದೇಶ ಪ್ರಯಾಣ ಮಾಡುತ್ತಿದ್ದ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ನೋಟಿಸ್‌ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಸ್ಟ್ 14ರಂದು ಜುಹು ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ, ಸಾಲ ಮತ್ತು ಹೂಡಿಕೆ ಒಪ್ಪಂದದ ಹೆಸರಿನಲ್ಲಿ ಉದ್ಯಮಿಯೊಬ್ಬರನ್ನು ₹60 ಕೋಟಿ ವಂಚನೆ ಮಾಡಿದ ಆರೋಪ ದಂಪತಿಗಳ ವಿರುದ್ಧ ಹೊರಿಸಲಾಗಿದೆ.

ಪೊಲೀಸ್ ಮೂಲಗಳ ಪ್ರಕಾರ, ಆರೋಪಿಗಳು ದೇಶ ಬಿಟ್ಟು ಹೋಗುವುದನ್ನು ತಡೆಯಲು ಅಥವಾ ಅವರ ಚಲನವಲನಗಳನ್ನು ಪತ್ತೆಹಚ್ಚಲು ಲುಕ್‌ಔಟ್‌ ನೋಟಿಸ್‌ ನೀಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಶಿಲ್ಪಾ ಶೆಟ್ಟಿ–ರಾಜ್ ಕುಂದ್ರಾ ದಂಪತಿಯ ವಿದೇಶ ಪ್ರಯಾಣಗಳ ಮೇಲೂ ಪೊಲೀಸ್ ಇಲಾಖೆಯ ಕಣ್ಗಾವಲು ಮುಂದುವರಿದಿದೆ.

ತನಿಖೆ ಇನ್ನೂ ಪ್ರಗತಿಯಲ್ಲಿದ್ದು, ಅಗತ್ಯವಿದ್ದಲ್ಲಿ ದಂಪತಿಯನ್ನು ಮತ್ತೆ ವಿಚಾರಣೆಗೊಳಪಡಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0