ನಾಪೋಕ್ಲು :ಧರ್ಮಸ್ಥಳ ಸಂಘದಿಂದ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧನ ಸಹಾಯ

Jun 15, 2025 - 10:42
 0  134
ನಾಪೋಕ್ಲು :ಧರ್ಮಸ್ಥಳ ಸಂಘದಿಂದ  ದೇವಸ್ಥಾನದ ಜೀರ್ಣೋದ್ಧಾರಕ್ಕೆ ಧನ ಸಹಾಯ

ವರದಿ:ಝಕರಿಯ ನಾಪೋಕ್ಲು

 ನಾಪೋಕ್ಲು :ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರಿಜಿಸ್ಟರ್ ಮಡಿಕೇರಿ ಇದರ ವತಿಯಿಂದ ನಾಪೋಕ್ಲು ಬಳಿಯ ಕೊಳಕೇರಿ ಗ್ರಾಮದ ಶ್ರೀ ಅಮ್ಮನ್ನೂರು ದೇವಸ್ಥಾನದ ಜೀರ್ಣೋದ್ದಾರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರು ಮಂಜೂರು ಮಾಡಿದ 50ಸಾವಿರ ರೂಗಳ ಸಹಾಯ ಧನದ ಮೊತ್ತವನ್ನು ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಧರ್ಮಸ್ಥಳ ಸಂಘದ ಯೋಜನಾಧಿಕಾರಿ ಪುರುಷೋತ್ತಮ ಅವರು ಹಸ್ತಾಂತರ ಮಾಡಿದರು.

ಈ ಸಂದರ್ಭ ಧರ್ಮಸ್ಥಳ ಸಂಘದ ನಾಪೋಕ್ಲು ಸುಭಾಷ್ ನಗರ ವಕ್ಕೂಟದ ಸೇವಾಪ್ರತಿನಿಧಿ ಉಮಾಲಕ್ಷ್ಮಿ,ಅಮ್ಮ ನ್ನೂರು ದೇವಸ್ಥಾನದ ಅಧ್ಯಕ್ಷರಾದ ಜಾಲಿ,ಕಾರ್ಯದರ್ಶಿ ಗಿರೀಶ್, ಆಡಳಿತ ಮಂಡಳಿ ಸದಸ್ಯರಾದ ಅಶೋಕ್, ಹರೀಶ್, ಚೋಮುಣಿ,ಪೊನ್ನಪ್ಪ, ಬಿದ್ದಪ್ಪ, ಶಂಕರ್ ಹಾಜರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0