ಪೊನ್ನಂಪೇಟೆ ; ಬಲ್ಯಮುಂಡೂರು ವಲಯ ಕಾಂಗ್ರೆಸ್ ಕಾರ್ಯಕರ್ತ ಸಭೆ: ಗ್ರಾಮಸ್ಥರ ಸಮಸ್ಯೆಗಳನ್ನಾಲಿಸಿದ ಶಾಸಕ ಪೊನ್ನಣ್ಣ

ಪೊನ್ನಂಪೇಟೆ ; ಬಲ್ಯಮುಂಡೂರು ವಲಯ ಕಾಂಗ್ರೆಸ್ ಕಾರ್ಯಕರ್ತ ಸಭೆ: ಗ್ರಾಮಸ್ಥರ ಸಮಸ್ಯೆಗಳನ್ನಾಲಿಸಿದ  ಶಾಸಕ ಪೊನ್ನಣ್ಣ

ಪೊನ್ನಂಪೇಟೆ :-ಪೊನ್ನಂಪೇಟೆ ತಾಲೂಕಿನ ಬಲ್ಯಮುಂಡೂರು ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಗ್ರಾಮದ ಬಸವೇಶ್ವರ ದೇವಾಲಯದ ಆವರಣದಲ್ಲಿ ನಡೆಯಿತು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರು, ಬಲ್ಯಮುಂಡೂರು ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ, ಬಲ್ಯಮುಂಡೂರು ವಲಯ ಕಾಂಗ್ರೆಸ್ ಅಧ್ಯಕ್ಷ ಕೊಟ್ಟಂಗಡ ರಾಜ ಕಾರ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಬಲ್ಯಮುಂಡೂರು ಕಾಂಗ್ರೆಸ್ ವಲಯ ಅಧ್ಯಕ್ಷ ಕೊಟ್ಟಂಗಡ ರಾಜ ಕಾರ್ಯಪ್ಪ ಅವರು ಮಾತನಾಡಿ, ಗ್ರಾಮದಲ್ಲಿ ಹಲವು ಅಭಿವೃದ್ದಿ ಕಾಮಗಾರಿಗಳು ಬಾಕಿ ಇದ್ದು, ಅವುಗಳನ್ನು ಮಾಡಿಕೊಡುವಂತೆ ಶಾಸರಲ್ಲಿ ಮನವಿ ಮಾಡಿದರು.

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಪಿ.ಕೆ.ಪೊನ್ನಪ್ಪ ಅವರು ಮಾತನಾಡಿ, ಬಲ್ಯಮೂಂಡೂರು ಗ್ರಾಮದ ಮುಖ್ಯಸ್ಥರು ಸೇರಿ 5 ದೇವರ ಮಧ್ಯದಲ್ಲಿ ಬಸವೇಶ್ವರ ದೇವಾಲಯವನ್ನು ನಿರ್ಮಿಸಿದ್ದಾರೆ. ಈ ದೇವಾಲಯ ಹಿಂದಿನ ಕಾಲದಲ್ಲಿ ವರ ನೀಡುವ ದೇವಸ್ಥಾನವೆಂದೇ ಪ್ರಸಿದ್ಧಿಯನ್ನು ಪಡೆದಿತ್ತು. ಕಳೆದ ಬಾರಿ ಶಾಸಕರು ಭೇಟಿ ನೀಡಿದ ಸಂದರ್ಭ ದೇವಸ್ಥಾನಕ್ಕೆ ಅನುದಾನ ನೀಡಿದ್ದನ್ನು ನೆನಪಿಸಿಕೊಂಡು ಧನ್ಯವಾದ ತಿಳಿಸಿದರು.

ಶಾಸಕರಾದ ಎ.ಎಸ್.ಪೊನ್ನಣ್ಣ ಮಾತನಾಡಿ, ಪ್ರತಿ ಕ್ಷೇತ್ರದಲ್ಲಿ ಗ್ರಾಮಸಭೆಯನ್ನು ನಡೆಸಿದಾಗ 50 ರಿಂದ 100 ರಸ್ತೆ ಸಮಸ್ಯೆ ಅರ್ಜಿಗಳು ಬರುತ್ತವೆ 3 ಲಕ್ಷಕ್ಕಿಂತ ಹೆಚ್ಚು ವಿದ್ಯುತ್ ಕಂಬಗಳಿವೆ, ಮಳೆ ಹಾನಿ ಪ್ರದೇಶಗಳಿವೆ, ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ. 10-15 ವರ್ಷಗಳಿಂದ ನಡೆಯದ ಕಾಮಗಾರಿಗಳನ್ನು ಒಂದೇ ಬಾರಿಗೆ ಪೂರ್ಣಗೊಳಿಸುವುದು ಕಷ್ಟ. ಆದರೆ ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ತಲುಪಲು ಪ್ರಯತ್ನಿಸುತ್ತೇನೆ. ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಹೆದ್ದಾರಿ ಕಾಮಗಾರಿಗೆ 120 ಕೋಟಿ, ವಿದ್ಯುತ್ ಶಕ್ತಿ ಬಲವರ್ಧನೆಗೆ 220 ಕೋಟಿ ಅನುದಾನ ಹಾಗೆಯೇ 2 ವಸತಿ ಶಾಲೆಗಳು, ಆಸ್ಪತ್ರೆಗಳ ಅಭಿವೃದ್ಧಿ ಸೇರಿದಂತೆ ಹತ್ತು ಹಲವು ಅಭಿವೃದ್ದಿ ಕಾರ್ಯಗಳಾಗಿವೆ ಎಂದರು.ಇದೇ ಸಂದರ್ಭ ಕಾಂಗ್ರೆಸ್ ಕಾರ್ಯಕರ್ತರ ಹಾಗೂ ಗ್ರಾಮಸ್ಥರ ಅಹವಾಲುಗಳನ್ನು ಶಾಸಕರು ಸ್ವೀಕರಿಸಿ, ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.

ಸಭೆಯಲ್ಲಿ ನಿವೃತ್ತ ಪಾಂಶುಪಾಲರಾದ ಮೊಣ್ಣಪ್ಪ, ದೇವಸ್ಥಾನ ಸಮಿತಿಯ ಅಧ್ಯಕ್ಷ ಕೊಟ್ಟಂಗಡ ಡಿಕ್ಕಿ, ದೇವತಕ್ಕ ಕೊಟ್ಟಂಗಡ ಕಟ್ಟಿ, ಮಾಜಿ ಕಾಂಗ್ರೆಸ್ ವಲಯ ಅಧ್ಯಕ್ಷ ಅರುಣ, ದೆಯಂಡ ಲಾಲ ತಮ್ಮಯ್ಯ, ಸಂತೋಷ್, ಪಿ. ಪ್ರಕಾಶ್, ಸೂರಜ್, ಮಧು, ಕೊಳೇರ ಸನ್ನು, ಚಂಡoಗಡ ಪ್ರವೀಣ್, ಪೆಮ್ಮಂಡ ಮಂಜು ಬೋಪಣ್ಣ, ಅಚಾರಮಾಡ ಜಾರೀಶ್ ಹಾಗೂ ಗ್ರಾಮಸ್ಥರು, ಪಕ್ಷದ ಪ್ರಮುಖರು ಹಾಜರಿದ್ದರು.

ವರದಿ:ಚೆಪ್ಪುಡಿರ ರೋಷನ್, ಪೊನ್ನಂಪೇಟೆ