ರಾಜ್ಯ ಮಟ್ಟದ ಕೋಆಪರೇಟಿವ್ ಬ್ಯಾಂಕ್ ನಿರ್ದೇಶಕರಾಗಿ ಯೋಗೇಶ್ ಆಯ್ಕೆ
admincoorgdaily
ಮಡಿಕೇರಿ:ಕರ್ನಾಟಕ ರಾಜ್ಯ ಸಹಕಾರ ಇಲಾಖೆಯ ಅಡಿಯಲ್ಲಿ "ಶ್ರೀ ಸತೀಶ್ ಜಾರಕಿಹೊಳಿ ಫೌಂಡೇಶನ್" ಹಾಗೂ ಡಾ.ಬಾಬುಜಗಜೀವನರಾಂ ಬ್ರಿಗೇಡ್ ನ ವತಿಯಿಂದ ರಾಜ್ಯ ಮಟ್ಟದಲ್ಲಿ ಸ್ಥಾಪಿಸಲಾಗಿರುವ ಡಾ. ಬಾಬು ಜಗಜೀವನರಾಂ ಪ್ರಜಾಸಂಗ್ರಾಮ ಕೋಆಪರೇಟಿವ್ ಸೊಸೈಟಿ ಕರ್ನಾಟಕ ಪ್ರಧಾನ ಕಚೇರಿ ಹಾವೇರಿ, ಇದರ ರಾಜ್ಯ ನಿರ್ದೇಶಕರಾಗಿ ಕೊಡಗು ಜಿಲ್ಲೆಯ ಚೆನ್ನಯ್ಯನ ಕೋಟೆ ಗ್ರಾಮದ ಯೋಗೇಶ್ ರವರು ಆಯ್ಕೆಯಾಗಿದ್ದಾರೆ. ರಾಜ್ಯದ ಮಟ್ಟದ ಕೋಆಪರೇಟಿವ್ ಸೊಸೈಟಿಯಾಗಿದ್ದು, ರಾಜ್ಯದ ವಿವಿಧ ಭಾಗಗಳಿಂದ ಒಟ್ಟು ಹದಿಮೂರು ನಿರ್ದೇಶಕರುಗಳು ಆಯ್ಕೆ ಯಾಗಿದ್ದು , ಯೋಗೇಶ್ ರವರು ಮೈಸೂರು, ಮಂಡ್ಯ,ಹಾಸನ,ಕೊಡಗು, ಚಾಮರಾಜನಗರ, ಸೇರಿದಂತೆ ಐದು ಜಿಲ್ಲೆಗಳನ್ನು ಒಳಗೊಂಡ ಮೈಸೂರು ವಿಭಾಗದಿಂದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.