ಸಿದ್ದಾಪುರ: ಮುನವ್ವಿರುಲ್ ಇಸ್ಲಾಂ ಮದರಸದಲ್ಲಿ ಬಕ್ರೀದ್ ಸಂದೇಶ
ಸಿದ್ದಾಪುರ:ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಮದರಸ ವಿದ್ಯಾರ್ಥಿಗಳಿಗೆ ಬಕ್ರೀದ್ ಹಬ್ಬದ ಪ್ರಯುಕ್ತ ಈದ್ ಮಧುರ ಕಾರ್ಯಕ್ರಮ ನಡೆಯಿತು.ಮದರಸ ಪ್ರಾಂಶುಪಾಲರಾದ ಆರಿಫ್ ಫೈಝಿ ಮಾತನಾಡಿ, ವಿದ್ಯಾರ್ಥಿಗಳು ಭವಿಷ್ಯ ಅಮೂಲ್ಯವಾದದ್ದು, ಒಳ್ಳೆಯ ರೀತಿಯಲ್ಲಿ ಜೀವನ ನಡೆಸಬೇಕೆಂದು ಕರೆ ನೀಡಿದರು.
ನೌಫಲ್ ಹುದವಿ ಮಾತನಾಡಿ ಎಲ್ಲರೂ ಈದ್ ನಮಾಝ್ ನಿರ್ವಹಿಸಲು ಸರಿಯಾದ ಆಗಮಿಸಬೇಕೆಂದು ಮನವಿ ಮಾಡಿ ಎಲ್ಲರೂ ಸೌಹಾರ್ದತೆ ನಡೆಸಲು ಕರೆ ನೀಡಿದರು.ಈ ಸಂದರ್ಭ ಮೊಯ್ದೀನ್ ಮುಸ್ಲಿಯಾರ್, ಹನೀಫ್ ಮುಸ್ಲಿಯಾರ್, ಸಿದ್ದೀಕ್ ವಾಫಿ ಅಹ್ಮದ್ ಯಮಾನಿ,ಜಬ್ಬಾರ್ ಫೈಝಿ, ಸಹದ್ ಫೈಝಿ ಹಾಜರಿದ್ದರು.