ಫೆ.19 ಮತ್ತು 20 ರಂದು ಜಂಬೂರು ಗ್ರಾಮದ ಶ್ರೀ ಬಸವೇಶ್ವರ ದೇವರ 12ನೇ ವರ್ಷದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ

Feb 16, 2026 - 14:21
 0  163
ಫೆ.19 ಮತ್ತು 20 ರಂದು ಜಂಬೂರು ಗ್ರಾಮದ ಶ್ರೀ  ಬಸವೇಶ್ವರ ದೇವರ 12ನೇ ವರ್ಷದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ

ಮಡಿಕೇರಿ: ಬಸವೇಶ್ವರ ದೇವರ ೧೨ನೇ ವರ್ಷದ ಪುನರ್ ಪ್ರತಿಷ್ಠಾಪನಾ ಕಾರ್ಯಕ್ರಮ ಫೆ.೧೯,೨೦ ರಂದು ದೇವಾಲದಯ ಆವರಣದಲ್ಲಿ ನಡೆಯಲಿದೆ ಎಂದು ಬಸವೇಶ್ವರ ದೇವಾಲಯ ಅಭಿವೃದ್ಧಿ ಸಮಿತಿಯ ಸಲಹೆಗಾರರಾದ ಸ್ವಾಮಿ ಸೋಮನಾಥ ನಂದಪುರಿ ತಿಳಿಸಿದ್ದಾರೆ.

 ಹಲವು ಶತಮಾನಗಳ ಇತಿಹಾಸವಿರುವ ಜಂಬೂರು ಗ್ರಾಮದ ಶ್ರೀ ಬಸವೇಶ್ವರ ದೇವಾಲಯವು ಶಿಥಿಲಾವಸ್ಥೆಯಲ್ಲಿದ್ದಾಗ ೨೦೧೫ರ ಫೆ.೨೦ರಂದು ಜೀರ್ಣೋದ್ಧಾರ ಮಾಡಲಾಯಿತು. ದೇವರ ಪುನರ್‌ಪ್ರತಿಷ್ಠಾಪನೆ ಮಾಡಿ ಇದೀಗ ೧೧ ವರ್ಷಗಳು ಗತಿಸಿದ್ದು, ೧೨ನೇ ವರ್ಷದ ಪುನರ್ ಪ್ರತಿಷ್ಠಾಪನಾ ಕಾರ್ಯ ಸಂತಶ್ರೇಷ್ಠರು, ದೈವಜ್ಞರ ಮಾರ್ಗದರ್ಶನದಲ್ಲಿ ಫೆ.೧೯ ಮತ್ತು ೨೦ರಂದು ವಿಶೇಷ ಪೂಜೆಗಳೊಂದಿಗೆ ನಡೆಯಲಿವೆ ಎಂದು ತಿಳಿಸಿದರು. ಕಾರ್ಯಕ್ರಮ ಫೆ.೧೯ರ ಸಂಜೆ ಆರಂಭವಾಗಲಿದೆ. ಫೆ.೨೦ರಂದು ಕುಂಬಾಭಿಷೇಕ, ಕಳಾಶಭಿಷೇಕ ಇತ್ಯಾದಿ ನಡೆಯಲಿದೆ ಎಂದು ತಿಳಿಸಿದ್ದಾರೆ.

 ಫೆ.೨೦ರ ಬೆಳಗ್ಗೆ ೧೧ ಗಂಟೆಗೆ ಧಾರ್ಮಿಕ ಸಭೆ ನಡೆಯಲಿದ್ದು, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ದೇವಾಲಯ ಅಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷ ಎಸ್.ಡಿ.ಲೋಕೇಶ್, ಅಧ್ಯಕ್ಷರಾದ ರಮೇಶ್, ಉಪಾಧ್ಯಕ್ಷರಾದ ರತೀಶ್, ಖಜಾಂಚಿ ಹರೀಶ್ ಉಪಸ್ಥಿತರಿದ್ದರು.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0