17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಸಮಿತಿ ಸಭೆ

Apr 5, 2026 - 12:12
 0  116
17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಸಮಿತಿ ಸಭೆ

ಸುಂಟಿಕೊಪ್ಪ;17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಸಮಿತಿಯ ಸಭೆಯು ಅಂದರೆ ಶನಿವಾರ ಸಂಜೆ 5:00 ಗಂಟೆಗೆ ದ್ವಾರಕಾ ಸಭಾಂಗಣದಲ್ಲಿ ಸಮಿತಿಯ ಅಧ್ಯಕ್ಷ ಸುನಿಲ್ ಅವರ ನೇತೃತ್ವದಲ್ಲಿ ನಡೆಯಿತು. ಈ ಸಭೆಯಲ್ಲಿ ಬಹಳಷ್ಟು ಚರ್ಚೆಗಳು ನಡೆದವು.

ಅದರಂತೆ ಕಾರ್ಯಕ್ರಮದಲ್ಲಿ ಶಿಸ್ತು ಬದ್ಧವಾಗಿ ಮತ್ತು ಅಚ್ಚುಕಟ್ಟಾಗಿ ಮೆರವಣಿಗೆ ನಡೆಸುವ ಜವಾಬ್ದಾರಿಯನ್ನ ಮೆರವಣಿಗೆ ಸಮಿತಿ ಒತ್ತುಕೊಳ್ಳುವುದರ ಜೊತೆಗೆ ಎಲ್ಲೂ ಕೂಡ ಕುಂದುಕೊರತೆಗಳು ಆಗದ ರೀತಿಯಲ್ಲಿ ನಡೆಸಲು ನಿರ್ಧರಿಸಲಾಯಿತು.

 ಇಲ್ಲಿಯ ವಿವಿಧ ಸಂಘಗಳ ಪದಾಧಿಕಾರಿಗಳನ್ನು ಭೇಟಿಯಾಗಿ ಮೆರವಣಿಗೆಗೆ ಸ್ತಬ್ಧ‌ಚಿತ್ರಕ್ಜೆ ಅವಕಾಶವನ್ನು ಕೋರಲು ನಿರ್ಧರಿಸಲಾಯಿತು. ಚರ್ಚಿಸಿದ ವಿಷಯಗಳನ್ನು ಪದ್ಯದಲ್ಲಿ ಜಿಲ್ಲಾ ಸಮಿತಿ ಮತ್ತು ಸ್ವಾಗತ ಸಮಿತಿಯ ಒಂದು ಚರ್ಚಿಸಿ ಮೆರವಣಿಗೆ ಬೇಕಾದ ಸೌಲಭ್ಯಗಳ ಬಗ್ಗೆ ಮತ್ತು ಅವಕಾಶಗಳ ಬಗ್ಗೆ ಚರ್ಚಿಸಿ ನಂತರ ಸಭೆ ಕರೆಯಲು ನಿರ್ಧರಿಸಲಾಯಿತು.

 ಸಭೆಯಲ್ಲಿ ಸಾವಿತ್ರಿ, ಆಧಂ ರಫೀ, ಅಬ್ಧುಲ್ ಅಜೀಜ್, ಸುರೇಶ್ ಗೋಪಿ, ಶರೀಫ್, ವಿನ್ಸೆಂಟ್, ನಾಗರತ್ಮ, ಚಿತ್ರ, ಲೀಲಾವತಿ ಇದ್ದರು..

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0