ಎಸ್.ಕೆ.ಎಸ್ ಇಂಗ್ಲಿಷ್ ಮೀಡಿಯಂ ಶಾಲೆ, ಕಲ್ಲುಮಠ, ಕೊಡ್ಲಿಪೇಟೆಯಲ್ಲಿ ಸಂಭ್ರಮದ 77ನೇ ಗಣರಾಜ್ಯೋತ್ಸವ

Jan 28, 2026 - 11:53
 0  137
ಎಸ್.ಕೆ.ಎಸ್  ಇಂಗ್ಲಿಷ್ ಮೀಡಿಯಂ ಶಾಲೆ, ಕಲ್ಲುಮಠ, ಕೊಡ್ಲಿಪೇಟೆಯಲ್ಲಿ ಸಂಭ್ರಮದ 77ನೇ ಗಣರಾಜ್ಯೋತ್ಸವ

ಕೊಡ್ಲಿಪೇಟೆ:ಎಸ್.ಕೆ.ಎಸ್. ಇಂಗ್ಲಿಷ್ ಮೀಡಿಯಂ ಶಾಲೆ, ಕಲ್ಲುಮಠ, ಕೊಡ್ಲಿಪೇಟೆಯಲ್ಲಿ 77ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಧ್ವಜಾರೋಹಣವನ್ನು ಶ್ರೀಮತಿ ಡಾ. ಧನಿಕಾ ಸಿ.ಎಸ್, ಆರೋಗ್ಯ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ಕೊಡ್ಲಿಪೇಟೆ, ಇವರು ನೆರವೇರಿಸಿದರು.

 ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀಯುತ ಮನಕುಮಾರ್ ಎನ್.ಜೆ., ಕಂದಾಯಾಧಿಕಾರಿಗಳು, ಕೊಡ್ಲಿಪೇಟೆ, ಇವರು ಭಾಗವಹಿಸಿ ಮಾತನಾಡಿದರು. ಶಾಲಾ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಎಲ್ಲರ ಮನಸೂರೆಗೊಂಡರು.

 ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಶ್ರೀಶ್ರೀಶ್ರೀ ಮಹಾಂತ ಸ್ವಾಮೀಜಿಗಳು, ವಿದ್ಯಾರ್ಥಿಗಳು ಶಿಸ್ತು, ಮೌಲ್ಯಗಳು ಹಾಗೂ ಉತ್ತಮ ಚಟುವಟಿಕೆಗಳನ್ನು ಅಳವಡಿಸಿಕೊಂಡರೆ ಉತ್ತಮ ನಾಗರಿಕರಾಗಿ ರಾಷ್ಟ್ರವನ್ನು ಬಲಪಡಿಸಲು ಸಾಧ್ಯವೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಯುತ ವಿಶ್ವನಾಥ್ ಡಿ.ಎಸ್. , ಕಾರ್ಯದರ್ಶಿಗಳಾದ ಶ್ರೀಯುತ ದಿವಾಕರ್ ಎಚ್.ಎಂ., ನಿರ್ದೇಶಕರಾದ ಶ್ರೀಯುತ ಶಿವಶೇಖರ ಎಸ್. ಎಸ್., ಸೇರಿದಂತೆ ಶಾಲೆಯ ಮುಖ್ಯ ಶಿಕ್ಷಕರಾದ ಅಭಿಲಾಷ ಹೆಚ್. ಎಂ., ಹಾಗೂ ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು.

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 1